ಪೆಂಟಗಾನ್‌ ಬಳಿ ಸ್ಪೋಟ – ಸುಳ್ಳು ವರದಿ ವೈರಲ್

ಮಂಗಳೂರು: ಅಮೆರಿಕಾದ ರಾಜಧಾನಿ ವಾಷಿಂಗ್ಟನ್‌ ಡಿಸಿಯ ಪೆಂಟಗಾನ್‌ ನಲ್ಲಿ ಭಾರೀ ಸ್ಪೋಟದ ಸುದ್ದಿ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್‌ ಆಗುತ್ತಿದೆ.

ಇದೇ ವೈರಲ್‌ ವಿಡಿಯೋ ಆಧಾರದಲ್ಲಿ ಹಲವು ಮಾದ್ಯಮಗಳು ಇದನ್ನು ವರದಿ ಮಾಡಿತ್ತು. ಮಾತ್ರವಲ್ಲ ಕಾರ್ಯತಂತ್ರದ ತಜ್ಞರಾದ ಪ್ರೊ.ಮಾಧವ ವಲಪಾಟ್‌ ಎಂಬವರೊಂದಗೆ ಮಾತುಕತೆ ನಡೆಸಿ ವಿಶ್ಲೇಷಣೆಯನ್ನೂ ನಡೆಸಿತ್ತು. ಆದರೆ ಸ್ಪೋಟದ ಸುದ್ದಿಯನ್ನು ಅಮೇರಿಕಾದ ಅಧಿಕಾರಿಗಳು ನಿರಾಕರಿಸಿದ್ದಾರೆ. ಪೆಂಟಗಾನ್‌ ಕಾಂಪ್ಲೆಕ್ಸ್ ನಲ್ಲಿ ಯಾವುದೇ ಸ್ಪೋಟ ನಡೆದಿಲ್ಲ ಎಂದು ಪೆಂಟಗಾನ್‌ ಅಧಿಕಾರಿಗಳು ದೃಡಪಡಿಸಿದ್ದಾರೆ. ವೈರಲ್‌ ಆಗಿರುವ ವಿಡಿಯೋ ಮತ್ತು ಚಿತ್ರವನ್ನು ಕೃತಕ ಬುದ್ದಿಮತ್ತೆ ಬಳಸಿ ರಚಿಸಲಾಗಿದೆ ಎಂದು ತಿಳಿದು ಬಂದಿದೆ.

 

LEAVE A REPLY

Please enter your comment!
Please enter your name here