ಮಂಗಳೂರು: 2022-23ರ ಹಣಕಾಸು ವರ್ಷದಲ್ಲಿ ಎಂಟು ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರದ್ದು ಗೊಳಿಸಿರುವ ರಿಸರ್ವ್ ಬ್ಯಾಂಕ್ ನಿಯಮ ಪಾಲಿಸದ ಬ್ಯಾಂಕ್ ಗಳ ದಂಡ ವಿಧಿಸಿದೆ.
ಪರವಾನಗಿ ರದ್ದು ಮಾಡಲಾದ ಬ್ಯಾಂಕಿನ ವಿವರ ಇಲ್ಲಿದೆ,
1.ಮುಧೋಳ ರದ್ದು ಮಾಡಲಾದ ಬ್ಯಾಂಕ್, 2.ಮಿಲ್ಲತ್ ಸಹಕಾರಿ ಬ್ಯಾಂಕ್, 3.ಶ್ರೀ ಆನಂದ ಸಹಕಾರಿ ಬ್ಯಾಂಕ್, 4.ರೂಪಾಯಿ ಸಹಕಾರಿ ಬ್ಯಾಂಕ್, 5.ಡೆಕ್ಕನ್ ಅರ್ಬನ್ ಕೋ-ಅಪರೇಟಿನ್ ಬ್ಯಾಂಕ್, 6.ಲಕ್ಷ್ಮಿ ಸಹಕಾರಿ ಬ್ಯಾಂಕ್, 7.ಸೇನಾ ವಿಕಾಸ್ ಕೋ-ಅಪರೇಟಿನ್ ಬ್ಯಾಂಕ್, 8.ಬಾಬಾಜಿ ಮಹಿಳಾ ಅರ್ಬನ್ ಬ್ಯಾಂಕ್. ಈ ಬ್ಯಾಂಕ್ ಗಳು ಬ್ಯಾಂಕಿಂಗ್ ನಿಯಂತ್ರಣದ ನಿಯಮಗಳನ್ನು ಪಾಲಿಸದ ಕಾರಣ ಆರ್.ಬಿ.ಐ ಈ ಬ್ಯಾಂಕ್ ಗಳ ಪರವಾನಗಿ ರದ್ದು ಮಾಡಿದೆ. ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆರ್.ಬಿ.ಐ ನಿಗಾ ವಹಿಸಿದ್ದು 2019-20ರಲ್ಲಿ 2, 2020-21ರಲ್ಲಿ 3, 2021-23 ರಲ್ಲಿ 12 ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ.