ಮಂಗಳೂರು: 2019 ರಲ್ಲಿ ಅಮೇರಿಕಾ ಮಿಸ್‌ರಿಯಲ್ಲಿ ತನ್ನ 95ನೇ ವಯಸ್ಸಿನಲ್ಲಿ ಮೃತರಾದ ಕೆಥೋಲಿಕ್ ಸನ್ಯಾಸಿನಿ ವಿಲ್ ಹೆಲ್ಮಿನಾ ಲ್ಯಾಂಕಾಸ್ಟರ್ ಅವರ ಮೃತದೇಹ ಕೆಡದೆ ಹಾಗೇ ಇರುವುದು ಕಂಡು ಬಂದಿದ್ದು ಕೌತುಕಕ್ಕೆ ಕಾರಣವಾಗಿದೆ.
2019 ಮೇ.29ರಂದು ಮರಣ ಹೊಂದಿದ್ದ ಈ ಕ್ರೈಸ್ತ ಸನ್ಯಾಸಿನಿಯ ಶವವನ್ನು ಶವ ಪೆಟ್ಟಿಗೆ ಯಲ್ಲಿಟ್ಟು ಸಮಾಧಿ ಮಾಡಲಾಗಿತ್ತು.ಅವರ ಶವವನ್ನು ಬೇರೆಡೆ ಹೂಳಲು 4 ವರ್ಷದ ಬಳಿಕ ಕ್ರಮ ಕೈಗೊಳ್ಳಲಾಗಿತ್ತು.ಮಣ್ಣು ಅಗೆದು ಶವಪೆಟ್ಟಿಗೆ ಮೇಲೆತ್ತಿ ತೆರೆದು ನೋಡಿದಾಗ ಮೃತದೇಹದಲ್ಲಿ ಯಾವುದೇ ಬದಲಾವಣೆಯಾಗದೆ,ಕೂದಲು,ಮೂಗು, ತಲೆ, ಕಣ್ಣು ಹಾನಿಯಾಗದೆ ಉಳಿದಿತ್ತು. ಒಂದೆರಡು ತಿಂಗಳಲ್ಲಿ ಅಸ್ಥಿಪಂಜರವಾಗುವ ದೇಹ 4 ವರ್ಷಗಳವರೆಗೆ ಎನೂ ಆಗದೆ ಹಾಗೇ ಉಳಿದಿರುವುದು ನೋಡಿ ಮಿಸ್‌ರಿ ನಗರದ ಜನರಿಗೆ ಆಶ್ಚರ್ಯವಾಗಿದೆ. ಮಿಸ್‌ರಿ ಪಟ್ಟಣದ ಜನರಲ್ಲದೆ, ಪ್ರವಾಸಿಗರು ಈಗ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಿತ್ತಿದ್ದಾರೆ. ವಿಲ್ ಹೆಲ್ಮಿನಾ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು,ಮತ್ತೆ ಅಂತ್ಯಕ್ರಿಯೆ ನಡೆಯಲಿದೆ.
ಅವರ ಶವದ ಬಳಿ ಸೂಚನಾ ಫಲಕವೊಂದನ್ನು ಹಾಕಲಾಗಿದ್ದು,ಅದರಲ್ಲಿ ಸಹೋದರಿಯ ದೇಹವನ್ನು ವಿಶೇಷವಾಗಿ ಅವರ ಪಾದಗಳನ್ನು ಸ್ಪರ್ಶಿಸುವಲ್ಲಿ ದಯವಿಟ್ಟು ಮೃದುವಾಗಿರಿ ಎಂದು ಬರೆಯಲಾಗಿದೆ.