ಸೋಮೇಶ್ವರ ಬೀಚಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ – ಐದು ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ಹೊರವಲಯದ ಉಳ್ಳಾಲ ಸೋಮೇಶ್ವರ ಬೀಚಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ.

ಬಸ್ತಿ ಪಡ್ಪು ನಿವಾಸಿ ಯತೀಶ್‌  ತಲಪಾಡಿ ನಿವಾಸಿಗಳಾದ ಸಚಿನ್ ಮತ್ತು ಸುಹಾನ್ ಅಖಿಲ್ ಮತ್ತು ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿದ್ದು,  ಐಪಿಸಿ ಸೆಕ್ಷನ್ 307 ಮತ್ತು ಗಲಭೆ ಸೃಷ್ಟಿ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸರ ಪ್ರತ್ಯೇಕ ಮೂರು ತಂಡದಿಂದ ತನಿಖೆ ಮುಂದುವರಿಸಲಾಗಿದ್ದು ಇನ್ನಷ್ಟು ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ಮಂಗಳೂರು ಪೊಲೀಸ್ ಕಮಿಷನರ್ ಕುಲ್ದೀಪ್ ಜೈನ್ ಉಳ್ಳಾಲ ಠಾಣೆಗೆ ಭೇಟಿ ನೀಡಿ ಸಿಸಿಬಿ ಎಸಿಪಿ ಬಿಎ ಹೆಗಡೆ ಮತ್ತು ಉಳ್ಳಾಲ ಇನ್ಸ್ಪೆಕ್ಟರ್ ಅವರಿಂದ ಮಾಹಿತಿ ಪಡೆದು ಮೂರು ಪ್ರತ್ಯೇಕ ತಂಡಗಳಿಗೆ ಸಮಗ್ರ ತನಿಖೆ ನಡೆಸಿ ಉಳಿದ ಆರೋಪಿಗಳ ಪತ್ತೆಗೆ ಆದೇಶಿಸಿದ್ದಾರೆ.

ಈ ನಡುವೆ ಅಮಾಯಕರ ಬಂಧನ ಮಾಡಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ನಾಯಕರು ಠಾಣೆಗೆ ಭೇಟಿ ನೀಡಿ ಕಮಿಷನರ್ ಜೊತೆ ಮಾತುಕತೆ ನಡೆಸಿ ಅಮಾಯಕರ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಕೇಸಿನಲ್ಲಿ ಸಂಬಂಧಪಡದವರಿದ್ದರೆ ಬಿಡುಗಡೆ ಮಾಡುವ ಭರವಸೆಯನ್ನು ನಾಯಕರಿಗೆ ನೀಡಲಾಗಿದೆ. ಕಾಂಗ್ರೆಸ್ ಸರಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ ಕಾಲೇಜಿನ ಅನ್ಯ ಕೋಮಿನ ವಿದ್ಯಾರ್ಥಿಗಳು ಸೋಮೇಶ್ವರ ಬೀಚಿಗೆ ಬಂದಿದ್ದಾರೆ. ಪವಿತ್ರ ಸ್ಥಳದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನಿಸಿದ್ದಾರೆ. ಇದು ತಪ್ಪಾದರೂ ಕ್ಷೇತ್ರದ ಬಳಿಯ ಅಶ್ಲೀಲ ವರ್ತನೆ ತೋರಿದಾಗ ಆಕ್ರೋಶ ಸಹಜವಾಗಿದೆ ಪೊಲೀಸ್ ಇಲಾಖೆ ಈ ಕಡೆ ಗಮನಹರಿಸಬೇಕು ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದು. ಅಮಾಯಕರ ಬಂಧನ ಸರಿಯಲ್ಲ ಯುವಕರು ನಮ್ಮ ಕಾರ್ಯಕರ್ತರ ಹೌದೋ ಅಲ್ಲವೋ ಎನ್ನುವುದು ಮುಖ್ಯವಲ್ಲ ಅವರ ಮನೆಯವರು ಹೇಳಿದಾಗ ಠಾಣೆಗೆ ಬಂದಿದ್ದೇವೆ ಎಲ್ಲಾ ವೈದ್ಯಕೀಯ ಕಾಲೇಜಿನ ಮುಖ್ಯಸ್ಥರ ಜೊತೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡುವುದಾಗಿ ಠಾಣೆಗೆ ಭೇಟಿ ನೀಡಿ ಕಮಿಷನರ್ ಜೊತೆ ಮಾತುಕತೆ  ನಡೆಸಿದ ಬಳಿಕ ಸತೀಶ್ ಕುಂಪಲ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here