ಮಂಗಳೂರು ( ಹೈದರಾಬಾದ್ ): ಅರ್ಚಕನೊಬ್ಬ ಪ್ರೇಯಸಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಮ್ಯಾನ್ ಹೋಲ್ ಗೆ ಎಸೆದಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ನಡೆದಿದೆ. ಆರೋಪಿಯನ್ನು ಶಂಶಾಬಾದನ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕ ವೆಂಕಟಸೂರ್ಯ ಸಾಯಿಕೃಷ್ಣ(36) ಎಂದು ಗುರುತಿಸಲಾಗಿದೆ. ಮೃತ ಮಹಿಳೆಯನ್ನು ಕುರುಗಂಟಿ ಅಪ್ಸರಾ (30) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಅರ್ಚಕ ಬಿಲ್ಡರ್ ಆಗಿರುವ ಸಾಯಿ ಕೃಷ್ಣಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆರೋಪಿ ಅಪ್ಸರಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.