ಮಂಗಳೂರು: ಕಾರ ಹುಣ್ಣಿಮೆ ಬಳಿಕ ನಡೆಸಲಾಗುವ ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ನಡೆದಿದೆ.
ಇಲ್ಲಿ ಪ್ರತಿ ವರ್ಷ ಕಾರ ಹುಣ್ಣಿಮೆ ಆಚರಣೆ ನಡೆಸುತ್ತಾ ಬರಲಾಗಿದ್ದು ಇದರ ಭಾಗವಾಗಿ ಎತ್ತು ಬೆದರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಬಾರಿ ಎತ್ತು ಓಡಿಸುವ ಸಮಯದಲ್ಲಿ ಎತ್ತಿನಿಂದ ತಿವಿತಕ್ಕೊಳಗಾಗಿ ಮತ್ತು ಕಾಲಿನಡಿಗೆ ಬಿದ್ದು ಎಂಟಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
#VisualsRDisturbing Several injured & 2 are in critical condition during a bull run festival at #Vijayapura district of #Karnataka. During the famous Kari festival- a total of 8 bulls were tied to ropes and made to run. Several got injured due to trampling. pic.twitter.com/E8kGeVRJvc
— Imran Khan (@KeypadGuerilla) June 11, 2023