ಗಂಡ ಬೇರೆ ಮನೆ ಮಾಡದ ಮುನಿಸು – ಅತ್ತೆಯನ್ನು ಕೊಂದ ಸೊಸೆ

ಮಂಗಳೂರು: ಪತಿ ಹಾಗೂ ಅತ್ತೆಯ ಮೇಲೆ ಸೊಸೆಯೊಬ್ಬಳು ಹಲ್ಲೆ ಮಾಡಿಸಿ ಅತ್ತೆಯನ್ನು ಕೊಲ್ಲಿಸಿದ ಪ್ರಕರಣ ಬೆಳಗಾವಿಯ ಬೈಲಹೊಂಗಲದಲ್ಲಿ ನಡೆದಿದೆ.

ಮೃತ ಅತ್ತೆಯನ್ನು ಮಹಬೂಬಿ ಯಾಖುಷಿ (53) ಎಂದು ಗುರುತಿಸಲಾಗಿದೆ. ಮೆಹರೂನಿ ಯಾಖುಷಿ ಹಲ್ಲೆ ಮಾಡಿಸಿದ ಸೊಸೆ ಎಂದು ತಿಳಿದು ಬಂದಿದೆ. ಗಂಡ ಸುಬ್ಹಾನ್ ಬೇರೆ ಮನೆ ಮಾಡಲಿಲ್ಲ ಎಂದು ಪತ್ನಿ ಈ ಕೃತ್ಯ  ಎಸಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತನ್ನ ಇಬ್ಬರು ಸಹೋದರೊಂದಿಗೆ ಸೇರಿ ಅತ್ತೆ ಹಾಗೂ ಪತಿಯ ಮೇಲೆ ರಾಡ್ ನಿಂದ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಮಹಬೂಬಿ ಸಾವನ್ನಪ್ಪಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here