ಸಂಚಲನ ಮೂಡಿಸಿದ ಮಾಜಿ ಸಿಎಂ ಬೊಮ್ಮಾಯಿ ಮತ್ತು ಶಾಮನೂರು ಶಿವಶಂಕರಪ್ಪ ಗುಪ್ತ ಮಾತುಕತೆ

ಮಂಗಳೂರು (ದಾವಣಗೆರೆ): ರಾಜಕಾರಣದಲ್ಲಿ ಹೊಂದಾಣಿಕೆ ರಾಜಕಾರಣ ಇಂದು ನಿನ್ನೆಯದ್ದಲ್ಲ. ಹೊಂದಾಣಿಕೆ ರಾಜಕಾರಣದ ಚರ್ಚೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಬಿಜೆಪಿಯೊಳಗೆ ಅಸಮಾಧಾನ ಹೊಗೆಯಾಡುತ್ತಿದೆ. ಈ ಬಗ್ಗೆ ಈಗಾಗಲೇ ಸಂಸದ ಪ್ರತಾಪ ಸಿಂಹ, ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಹಲವಾರು ನಾಯಕರು ತಮ್ಮ ಅಸಮಾಧಾನವನ್ನು ಮಾದ್ಯಮದ ಮೂಲಕ ಹೊರಹಾಕಿದ್ದಾರೆ.

ಇದಕ್ಕೆ ಪುಷ್ಠಿ ನೀಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗುಪ್ತ ಮಾತುಕತೆ ನಡೆಸಿರುವುದು ಬಹಿರಂಗಗೊಂಡಿದ್ದು ರಾಜ್ಯ ರಾಜಕಾರಣದಲ್ಲಿ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ದಾವಣಗೆರೆಯ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟೊಂದರಲ್ಲಿ ಜೂ.13 ರಂದು ಬೊಮ್ಮಾಯಿ ಮತ್ತು ಶಿವಶಂಕರಪ್ಪ ಗುಪ್ತ ಮಾತುಕತೆ ನಡೆಸಿದ್ದಾರೆ. ರೆಸಾರ್ಟ್ ನ  ಬಾಗಿಲು ಮುಚ್ಚಿದ ಕೊಠಡಿಯಲ್ಲಿ ಸುಮಾರು 25 ನಿಮಿಷಗಳಷ್ಟು ಕಾಲ ಮಾತುಕತೆ  ನಡೆಸಿದ್ದಾರೆ. ಮಾತುಕತೆ ವಿವರ ಹೊರಬಿದ್ದಿಲ್ಲವಾದರೂ, ಇಬ್ಬರ ನಡುವಿನ ಮಾತುಕತೆ ರಾಜಕೀಯ ಪಡಸಾಲೆಯಲ್ಲಿ ಸಂಚಲನ ಮೂಡಿಸಿದೆ.

LEAVE A REPLY

Please enter your comment!
Please enter your name here