ತಾಯಿಗೆ ಹೊಡೆದ ಮಗ – ಪುತ್ರನಿಗೆ ಶಿಕ್ಷೆ ಕೊಡಬೇಡಿ ಎಂದ ಅಮ್ಮ

ಮಂಗಳೂರು: ಮಧ್ಯಪ್ರದೇಶದ ಇಂದೋರ್ ನಲ್ಲಿ ಸುರೇಶ್ ವರ್ಮಾ ಎಂಬ ವ್ಯಕ್ತಿ ತನ್ನ ತಾಯಿ ಲೀಲಾ ಬಾಯಿಗೆ ಕಪಾಲಮೋಕ್ಷ ಮಾಡಿ ಒದೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ಸುರೇಶ್ ವರ್ಮನನ್ನು ಬಂಧಿಸಿದ್ದಾರೆ.

ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಆದರೆ ಹೆತ್ತ ಅಮ್ಮ ಮಗನ ವಿರುದ್ಧ ಯಾವುದೇ ದೂರು ದಾಖಲಿಸಲು ನಿರಾಕರಿಸಿದ್ದಾರೆ. ಮಾತ್ರವಲ್ಲ ನನ್ನ ಮಗ ಕುಡಿದು ಈ ರೀತಿ ವರ್ತಿಸಿದ್ದಾನೆ ನನ್ನ ಮಗನನ್ನು ಬಿಡುಗಡೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here