ಮಂಗಳೂರು: ಶ್ರೀಲಂಕಾದ ಸೇನಾ ವೈದ್ಯರ ತಂಡ ವಿಶ್ವದ ಅತಿ ಭಾರವಾದ ಕಿಡ್ನಿ ಕಲ್ಲನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದುಹಾಕುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. 2004 ರಲ್ಲಿ ಭಾರತೀಯ ವೈದ್ಯರು ಮೂತ್ರಪಿಂಡದ ಅತಿ ದೊಡ್ಡ ಕಲ್ಲು ಹೊರ ತೆಗೆದು ದಾಖಲೆ ನಿರ್ಮಿಸಿದ್ದರು.
ಇದೀಗ ಕೊಲಂಬೋ ಮಿಲಿಟರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಂದ 13.372 ಸೆಂಟಿಮೀಟರ್ ಉದ್ದ ಮತ್ತು 801 ಗ್ರಾಂ ತೂಕವಿರುವ ಕಲ್ಲನ್ನು ಹೊರತೆಗೆದು ಗಿನ್ನೆಸ್ ದಾಖಲೆ ಮಾಡಿದೆ.
ಶ್ರೀಲಂಕಾದ ಕ್ಯಾನಿಸ್ಟಸ್ ಕೂಂಗೆಯವರ ಮೂತ್ರಪಿಂಡದಿಂದ 13.372 ಸೆಂಟಿಮೀಟರ್ ಅಳತೆಯ ಮೂತ್ರಪಿಂಡದ ಕಲ್ಲನ್ನು ಕಳೆದ ಜೂನ್ 1ರಂದು ಹೊರ ತೆಗೆಯಲಾಗಿದೆ ಎಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ದೃಢಪಡಿಸಿದೆ.ಈ ಹಿಂದೆ 2004ರಲ್ಲಿ ಭಾರತದ ವೈದ್ಯರು 13 ಸೆ.ಮೀ ಉದ್ದದ ಕಲ್ಲನ್ನು ಹೊರ ತೆಗೆದು ನಿರ್ಮಿಸಿದ್ದ ದಾಖಲೆಯನ್ನು ಶ್ರೀಲಂಕಾ ಮುರಿದಿದೆ. ಸೇನಾ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುದರ್ಶನ್ ನೇತೃತ್ವದಲ್ಲಿ ಡಾ.ಪತಿರತ್ನ ಹಾಗೂ ಡಾ.ತಮಶ ಪ್ರೇಮ ತಿಲಕ ಶಸ್ತ್ರಚಿಕಿತ್ಸೆ ನಡೆಸಿದ್ದರು.