62ರ ಹರೆಯದಲ್ಲಿ ಮೂರು ಮಕ್ಕಳ ತಂದೆಯಾದ ಗೋವಿಂದ

ಮಂಗಳೂರು: 62 ವರ್ಷದ ವ್ಯಕ್ತಿಯೊಬ್ಬ ಎರಡನೇ ಪತ್ನಿಯ ಮೂಲಕ ಮೂರು ಮಕ್ಕಳಿಗೆ ತಂದೆಯಾಗಿದ್ದಾನೆ. ಮಧ್ಯಪ್ರದೇಶದ ಸತ್ನ ಜಿಲ್ಲೆಯ ಉಚೆಹ್ರ ಬ್ಲಾಕ್ ನ ಆತರ್ವೇದಿಯಾ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

62 ವರ್ಷದ ಗೋವಿಂದ ಖುಶ್ವಾಹನ ಮೊದಲ ಹೆಂಡತಿಯ ಏಕೈಕ ಮಗ ಅಪಘಾತದಲ್ಲಿ ಸಾವನ್ನಪ್ಪಿದ್ದನು. ಮಗನ ಸಾವಿನಿಂದ ಕೊರಗುತ್ತಿದ್ದ ಗೋವಿಂದನನ್ನು ನೋಡಿದ ಮೊದಲ ಪತ್ನಿ ಆತನಿಗೆ ಹೀರಾಬಾಯಿ ಜೊತೆಗೆ ಎರಡನೇ ಮದುವೆ ಮಾಡಿಸಿದ್ದಳು. ಕಳೆದ ಸೋಮವಾರ ರಾತ್ರಿ ಹೀರಾಬಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಮಂಗಳವಾರ ಬೆಳಿಗ್ಗೆ ಸಿಸೇರಿಯನ್ ಮೂಲಕ ಹೀರಾಬಾಯಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

LEAVE A REPLY

Please enter your comment!
Please enter your name here