ಮೀಟರ್ ರೀಡರ್ ಎಡವಟ್ಟು – 7.71 ಲಕ್ಷ ರೂಪಾಯಿ ವಿದ್ಯುತ್ ಬಿಲ್ಲು ನೀಡಿದ ಸಿಬ್ಬಂದಿ

ಮಂಗಳೂರು: ಉಳ್ಳಾಲದ ಮನೆಯೊಂದಕ್ಕೆ 7.71 ಲಕ್ಷ ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಕಂಡ ಮನೆ ಮಾಲೀಕರು ಹೌಹಾರಿದ್ದಾರೆ. ಉಳ್ಳಾಲ ಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರಿಗೆ ಮೀಟರ್ ರೀಡರ್ ನೀಡಿರುವ ಬಿಲ್ ಕಂಡು ಶಾಕ್ ಆಗಿದೆ. ರೀಡರ್ ಬಳಿ ವಿಚಾರಿಸಿದಾಗ ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ.

ಬಿಲ್ ನಲ್ಲಿ 99.338 ಯುನಿಟ್ ವಿದ್ಯುತ್ ಖರ್ಚಾಗಿದ್ದು 7,71,072 ರೂಪಾಯಿ ಪಾವತಿಸುವಂತೆ ಸೂಚಿಸಲಾಗಿದೆ. ಈ ಹಿಂದೆ ಮಾಸಿಕ 3 ಸಾವಿರ ರೂಪಾಯಿ ಬಿಲ್ ಬರುತ್ತಿದ್ದು ನಾವು ಪ್ರತಿ ತಿಂಗಳು ಬಿಲ್ಲನ್ನು ಕಟ್ಟುತ್ತೇವೆ. ಆದರೆ ಈ ಬಾರಿ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ಬಂದಿರೋದು ನೋಡಿ ಶಾಕ್ ಆಗಿದೆ ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ಹೇಳಿದ್ದಾರೆ.

ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಮಾಡಿದ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ಲಲ್ಲಿ ಲೋಪ ಕಂಡು ಬಂದರೆ ಅದನ್ನು ಗ್ರಾಹಕರಿಗೆ ನೀಡುವಂತಿಲ್ಲ ಎಂದು ಹೇಳಿರುವ ಉಳ್ಳಾಲ ಉಪ ವಿಭಾಗದ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ್ 2,833 ರೂಪಾಯಿಗಳ ಪರಿಷ್ಕೃತ ಬಿಲ್ಲನ್ನು ಸದಾಶಿವ ಆಚಾರ್ಯ ಅವರಿಗೆ ನೀಡುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

LEAVE A REPLY

Please enter your comment!
Please enter your name here