ರೋಮಿಯೋ ಕಾಶಿಗೆ ಜೀವಾವಧಿ ಶಿಕ್ಷೆ- ಲ್ಯಾಪ್ ಟಾಪ್ ನಲ್ಲಿತ್ತು 400 ವಿಡಿಯೋ,1900 ಫೋಟೋ

ಮಂಗಳೂರು (ನಾಗರಕೋಯಿಲ್) : ತಮಿಳುನಾಡು ರಾಜ್ಯದ ನಟೋರಿಯಸ್ ಕ್ರಿಮಿನಲ್, ಕಾಮುಕ ರೋಮಿಯೋ ಕಾಶಿಗೆ ಮಹಿಳಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ.‌ ದಂಡ ವಿಧಿಸಿ ಆದೇಶಿಸಿದೆ.

ಕೇವಲ 29 ವರ್ಷದ ರೋಮಿಯೋ ಕಾಶಿ ಬಹಳಷ್ಟು ಮಹಿಳೆಯರೊಂದಿಗೆ ದೈಹಿಕ ಸಂಬಂಧ ಬೆಳೆಸಿ ಅವರ ಅರಿವಿಗೆ ಬಾರದಂತೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಬಳಿಕ ಹಣಕ್ಕಾಗಿ ಬೆದರಿಕೆಯನ್ನೊಡ್ಡುತ್ತಿದ್ದ ಆರೋಪವನ್ನು ಎದುರಿಸುತ್ತಿದ್ದ.
ಇತ್ತೀಚೆಗೆ ವೈದ್ಯೆಯೊಬ್ಬರು ಕಾಶಿಯ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಕೈಗೊಂಡ ಬಳಿಕ ಕಾಶಿಯ ಅಸಲಿಯತ್ತು ಬಯಲಾಗಿತ್ತು. ಬಳಿಕ ಆರೋಪಿ ರೋಮಿಯೋ ಕಾಶಿ ವಿರುದ್ಧ ಪೊಲೀಸ್ ದೂರು ದಾಖಲಿಸಲು ಬಹಳಷ್ಟು ಮಹಿಳೆಯರು ಮುಂದೆ ಬಂದಿದ್ದಾರೆ. ಪೊಲೀಸ್ ತನಿಖೆ ನಡೆಸಿದ ವೇಳೆ ಪೊಲೀಸರೇ ಬೆಚ್ಚಿ ಬೀಳುವಷ್ಟು ಸೆಕ್ಸ್ ವೀಡಿಯೋಗಳು, ಸಂತ್ರಸ್ತೆಯರ ಫೋಟೊಗಳು ದೊರಕಿತ್ತು. ಕಾಶಿಯ ಲ್ಯಾಪ್ ಟಾಪ್ ನಲ್ಲಿ 400 ಸೆಕ್ಸ್ ವಿಡಿಯೋಗಳು ಮತ್ತು ಸಂತ್ರಸ್ತೆಯರ 1900 ಫೋಟೋಗಳು ಪತ್ತೆಯಾಗಿದ್ದವು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾಶಿಯ ತಂದೆ ಥಂಕಪಾಂಡ್ಯನ್, ಸ್ನೇಹಿತರಾದ ಜಿನೋ ಮತ್ತು ದಿನೇಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here