ಮಂಗಳೂರು(ಲಾತೂರು): ಸತತ ಐದು ದಿನಗಳ ಕಾಲ, 127 ಗಂಟೆ ನಿರಂತರ ನೃತ್ಯ ಮಾಡುವ ಮೂಲಕ 16ರ ಬಾಲಕಿಯೊಬ್ಬಳು ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾಳೆ.
ಮಹಾರಾಷ್ಟ್ರ ಮೂಲದ ಹದಿನಾರು ವರ್ಷದ ಸೃಷ್ಟಿ ಸುಧೀರ್ ಜಗತಾಪ್ ಮ್ಯಾರಥಾನ್ ನೃತ್ಯದ ಮೂಲಕ ವಿಶ್ವ ದಾಖಲೆ ಬರೆದು, 5 ವರ್ಷಗಳ ಹಿಂದೆ ನೇಪಾಳ ಮೂಲದ ಬಂಧನಾ ನೇಪಾಳ್ 2018 ರಲ್ಲಿ ಸುಮಾರು 126 ಗಂಟೆಗಳ ಕಾಲ ನೃತ್ಯ ಮಾಡುವ ಮೂಲಕ ಬರೆದಿದ್ದ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ.
ಸೃಷ್ಟಿ ಮೇ.29 ರಿಂದ ಜೂನ್ 3 ವರೆಗೆ 127 ಗಂಟೆಗಳ ಕಾಲ ಲಾತೂರ್ ದಯಾನಂದ ಕಾಲೇಜು ಸಭಾಂಗಣದಲ್ಲಿ ಕಥಕ್ ನೃತ್ಯ ಪ್ರದರ್ಶಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ.