ಮಂಗಳೂರು(ಬೆಂಗಳೂರು): ಪಠ್ಯಪುಸ್ತಕ ತಿದ್ದುಪಡಿ ಮಾಡಿ ಸರಕಾರ ಆದೇಶ ಹೊರಡಿಸಿದೆ. ಸಮಾಜ ವಿಜ್ಞಾನ ವಿಷಯಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಕನ್ನಡ ಭಾಷಾ ಪುಸ್ತಕದಲ್ಲಿ ಒಂಬತ್ತು ಪಾಠಕ್ಕೆ ಕೊಕ್ ನೀಡಲಾಗಿದೆ. ಸಮಾಜ ವಿಜ್ಞಾನದಲ್ಲಿ 9 ಪಾಠಕ್ಕೆ ಕೊಕ್ ನೀಡಲಾಗಿದ್ದು, ಕೇಶವ ಹೆಗಡೇವಾರ್ ಬರೆದಿದ್ದ ಗದ್ಯ ನಿಜವಾದ ಆದರ್ಶ ಪುರುಷ ಯಾರಾಗಬೇಕು, ಎಂಬ ಪಠ್ಯ ತೆಗೆದುಹಾಕಲಾಗಿದ್ದು, ಚಕ್ರವರ್ತಿ ಸೂಲಿಬೆಲೆಯವರ ತಾಯಿ ಭಾರತೀಯ ಅಮರ ಪುತ್ರರು ಪಾಠಕ್ಕೆ ಕತ್ತರಿ ಹಾಕಲಾಗಿದೆ.
ನಿರ್ಮಲಾ ಸುರತ್ಕಲ್, ರಮಾನಂದ ಆಚಾರ್ಯರ ಪಾಠ ಕೈ ಬಿಡಲಾಗಿದೆ. ಪಾರಂಪಳ್ಳಿ ನರಸಿಂಹ ಐತಾಳ್, ಲಕ್ಷ್ಮೀಶ, ಕೆ ಟಿ ಗಟ್ಟಿ ಅವರ ಪಾಠವೂ ಇಲ್ಲ. ಪಿ ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ಕತ್ತರಿ ಹಾಕಲಾಗಿದೆ.
ಸಾವಿತ್ರಿಪುಲೆ, ಜವಾಹರಲಾಲ್ ನೆಹರು, ಅಂಬೇಡ್ಕರ್ ಪಠ್ಯ ಸೇರ್ಪಡೆ ಮಾಡಲಾಗಿದೆ. ಸುಕುಮಾರಸ್ವಾಮಿ ಕುರಿತ ಪಠ್ಯಕ್ಕೆ ಅವಕಾಶ ನೀಡಲಾಗಿದೆ. ಸಾರಾ ಅಬೂಬಕರ್, ವಿಜಯಮಾಲಾ, ರಂಗನಾಥ್ ಪಾಠ ಸೇರ್ಪಡೆಯಾಗಿದೆ. ವಾಲ್ಮೀಕಿ ಮಹರ್ಷಿ, ಉರುಸುಗಳಲ್ಲಿ ಭಾವೈಕ್ಯತೆ ಪಾಠ ಜೋಡಣೆ ಮಾಡಲಾಗಿದೆ. ಸಮಾಜ ವಿಜ್ಞಾನ ಪಾಠದಲ್ಲೂ ಹಲವು ಅಧ್ಯಾಯ ಸೇರ್ಪಡೆಗೊಳಿಸಲಾಗಿದೆ. ವೇದಕಾಲದ ಸಂಸ್ಕೃತಿ, ಹೊಸ ಧರ್ಮಗಳ ಉದಯ, ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಒಡೆಯರ್ ಕುರಿತ ಪಾಠ ಸೇರ್ಪಡೆ ಮಾಡಲಾಗಿದೆ.