ಯಶಸ್ವಿ ಹಾರಾಟ ನಡೆಸಿದ ಏರಿಯಲ್ ವೆಹಿಕಲ್ ತಪಸ್ 201

ಮಂಗಳೂರು (ಕಾರವಾರ): ಏರಿಯಲ್ ವೆಹಿಕಲ್ ತಪಸ್ 201 ರ ಪ್ರಾಯೋಗಿಕ ಹಾರಾಟ ಯಶಸ್ವಿಯಾಗಿದೆ ಎಂದು ಡಿಫೆನ್ಸ್ ರಿಸರ್ಚ್ ಡೆವಲಪ್ಮೆಂಟ್ ಆರ್ಗನೈಜೇಷನ್(ಡಿ ಆರ್ ಡಿ ಒ)  ತಿಳಿಸಿದೆ.

ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ ನಿಂದ ಜೂ.18 ರಂದು ಪ್ರಾಯೋಗಿಕ ಹಾರಾಟ ಆರಂಭಿಸಿದ ತಪಸ್ 201 ಕಾರವಾರ ನೌಕಾನೆಲೆಯಿಂದ 148 ಕಿಲೋಮೀಟರ್ ದೂರದಲ್ಲಿದ್ದ ಐಎನ್ಎಸ್ ಸುಭದ್ರದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

20,000 ಅಡಿ ಎತ್ತರದಲ್ಲಿ ಹಾರಾಡಿದ ತಪಸ್ 201 ಚಿತ್ರದುರ್ಗದಿಂದ 3 ಗಂಟೆ 30 ನಿಮಿಷಗಳ ತಡೆರಹಿತ ಹಾರಾಟ ನಡೆಸಿ ಕಾರವಾರದ ಅರಬ್ಬೀ ಸಮುದ್ರದಲ್ಲಿದ್ದ ಐಎನ್ಎಸ್ ಸುಭದ್ರಾದ ಇಳಿದಾಣದ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಾಯೋಗಿಕ ಪರೀಕ್ಷೆಯ ಬಳಿಕ ಮತ್ತೆ ಚಿತ್ರದುರ್ಗದ ಎ ಟಿ ಆರ್ ಕೆ ಸುರಕ್ಷಿತವಾಗಿ ಬಂದು ತಲುಪಿದೆ. ಈ ಮೂಲಕ ತನ್ನ ನಿಗದಿತ ಗುರಿಯನ್ನು ಮುಟ್ಟುವಲ್ಲಿ ತಪಸ್ 201 ಏರಿಯಲ್ ವೆಹಿಕಲ್ ಯಶಸ್ವಿಯಾಗಿದೆ ಎಂದು ಡಿಆರ್‌ಡಿಓ ತಿಳಿಸಿದೆ. ಮಧ್ಯಮ ಎತ್ತರದ ಈ ತಪಸ್ 201 ನ್ನು ಬೆಂಗಳೂರು ಮೂಲದ ಎರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಶ್ಮೆಂಟ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.

LEAVE A REPLY

Please enter your comment!
Please enter your name here