ಮೊದಲ ರಾತ್ರಿಗೆ ಅಡ್ಡಿಯಾದ ಫ್ಯಾನ್-‌ ಹೂಮಂಚವೇರಬೇಕಿದ್ದ ವರ ಆಸ್ಪತ್ರೆಯ ಮಂಚಕ್ಕೆ

ಮಂಗಳೂರು: ಆತನ ವಿವಾಹ ನಡೆದು ಮೊದಲ ರಾತ್ರಿಗೆ ಬೇಕಾದ ಏರ್ಪಡು ಮಾಡಲಾಗಿತ್ತು. ಮೊದಲ ರಾತ್ರಿಯ ಕನಸು ಕಾಣುತ್ತಾ ತನ್ನವಳಿಗಾಗಿ ಕಾಯುತ್ತಾ ಕೋಣೆಯಲ್ಲಿ ಮಲಗಿದ್ದ ಯುವಕನ ಬದುಕಿನಲ್ಲಿ ವಿಧಿಯಾಟದಿಂದಾಗಿ ಮಧುಮಂಚವೇರಬೇಕಿದ್ದ ವರ ಆಸ್ಪತ್ರೆಯ ಮಂಚದಲ್ಲಿ ಮಲಗಬೇಕಾಗಿ ಬಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ನಾಗೌರ್‌ ಜಿಲ್ಲೆಯ ಡಿದ್ವಾನದ ಮಕ್ರಾನ ಪಟ್ಟನದ ಗೌಡಬಸ್‌ ಮೊಹಲ್ಲಾ ನಿವಾಸಿ ಇಕ್ರಮ್‌ ಸಿಸೋಡಿಯಾ ಜೂ.9ರಂದು ಅಬ್ದುಲ್‌ ಸರೈ ನಿವಾಸಿ ಜನ್ನತ್‌ ಎಂಬ ಯುವತಿಯನ್ನು ವಿವಾಹವಾಗಿದ್ದರು. ನೂರಾರು ಕಲ್ಪನೆಗಳೊಂದಿಗೆ ಮೊದಲ ರಾತ್ರಿಯ ಕನಸು ಕಾಣುತ್ತಾ ಹೂ ಮಂಚದಲ್ಲಿ ತನ್ನವಳಿಗಾಗಿ ಕಾಯುತ್ತಾ ಕಣ್ಣು ಮುಚ್ಚಿ ಮಲಗಿದ್ದ ನೂತನ ವರನ ತಲೆಯ ಮೇಲೆ‌ ತಿರುಗುತ್ತಿದ್ದ ಸೀಲಿಂಗ್ ಫ್ಯಾನ್‌ ತುಂಡಾಗಿ ಬಿದ್ದಿದೆ. ರಕ್ತದ ಮಡುವಿನಲ್ಲಿದ್ದ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವರ ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್‌ ನಲ್ಲಿ ಮಲಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮದುಮಗನ ಕತ್ತಿನ ಸುತ್ತಾ 26 ಹೊಲಿಗೆ ಹಾಕಿರುವ ವೈದ್ಯರು ಪ್ರಾಣಾಪಾಯವಿಲ್ಲವೆಂದು ಹೇಳಿದ್ದಾರೆ. ಸದ್ಯ ಮೊದಲ ರಾತ್ರಿಯನ್ನು ಮುಂದೂಡಲಾಗಿದೆ.

LEAVE A REPLY

Please enter your comment!
Please enter your name here