ಮಕ್ಕಳಿಗಾಗಿ ವಿಶೇಷ ಮಾಹಿತಿ
ಕಪ್ಪು ಹುಲ್ಲೆ
( Antilope Cervicapra )
ಈ ಕಪ್ಪು ಹುಲ್ಲೆಯು ಕಾಲಿನಲ್ಲಿ ಗೊರಸುಳ್ಳ ಜಾತಿಗೆ ಸೇರಿದೆ. ಭಾರತೀಯ ಉಪಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈಗ ಇವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಭಾರತದಲ್ಲಿ ಇದರ ಸಂಖ್ಯೆಯು ಸುಮಾರು 50 ಸಾವಿರದಷ್ಟು ಇದೆ. ಇವು ಬಯಲು ಪ್ರದೇಶದಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ 5ರಿಂದ 50ರ ಗುಂಪಿನಲ್ಲಿರುತ್ತವೆ. ಗುಂಪಿನಲ್ಲಿ ಬಲಶಾಲಿಯಾದ ಗಂಡೇ ಯಜಮಾನ. ಹುಲ್ಲೆಗಳು ಅತ್ಯಂತ ವೇಗವಾಗಿ ಓಡುತ್ತದೆ. ಇವು ಹುಲ್ಲು ಮೇಯುವ ಪ್ರಾಣಿಗಳಾಗಿದ್ದು, ಅರಣ್ಯ ಪ್ರದೇಶದಿಂದ ದೂರವಿರುತ್ತದೆ. ನೀರಿಗಾಗಿ ಬಹು ದೂರದವರೆಗೂ ಸಾಗುತ್ತದೆ. ಸಾಮಾನ್ಯವಾಗಿ ಮರಿಗಳಿಗೆ ಹಗಲಿನಲ್ಲಿ ಮೊಲೆಯೂಡಿಸುತ್ತವೆ. ಇವುಗಳ ಆಹಾರವು ಪ್ರಮುಖವಾಗಿ ಹುಲ್ಲು, ಜಾಲಿ ಮರದ ಮುಳ್ಳು. ಇವುಗಳ ಆಯುಷ್ಯವು ಸರಾಸರಿ 12 ವರ್ಷಗಳು.