ಮಂಗಳೂರು(ತೆಲಂಗಾಣ): ತೆಲಂಗಾಣದ ಕರೀಂ ನಗರದಲ್ಲಿ ನೂತನವಾಗಿ ಪ್ರಾರಂಭಗೊಂಡ ಹೋಟೆಲೊಂದರಲ್ಲಿ ಒಂದು ರೂಪಾಯಿಗೆ ಬಿರಿಯಾನಿ ನೀಡುತ್ತಿದ್ದು ಬಿರಿಯಾನಿ ಖರೀದಿಸಲು ಜನ ಸಾಗರವೇ ಹರಿದುಬಂದಿದೆ.
ರೆಸ್ಟೋರೆಂಟ್ ಮಾಲೀಕರೊಬ್ಬರು ಗ್ರಾಹಕರನ್ನು ಆಕರ್ಷಿಸಲು ವಿನೂತನ ಮಾರುಕಟ್ಟೆ ತಂತ್ರವನ್ನು ಬಳಸಿದ್ದಾರೆ. ಹೊಸ ರೆಸ್ಟೋರೆಂಟ್ ತೆರೆದಿರುವ ವ್ಯಕ್ತಿ ಆರಂಭಿಕ ಆಫರ್ ಅಡಿಯಲ್ಲಿ ಒಂದು ರೂಪಾಯಿ ನೋಟು ತಂದವರಿಗೆ ಬಿರಿಯಾನಿ ನೀಡಲಾಗುವುದು ಎಂದು ಎಲ್ಲೆಡೆ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಿದ್ದಾರೆ.
ಇದರಿಂದ ಒಂದು ರೂಪಾಯಿ ಬಿರಿಯಾನಿ ಖರೀದಿಸಲು ಜನಸಾಗರವೇ ಹರಿದು ಬಂದಿದೆ.
ಬಿರಿಯಾನಿ ಪ್ರಿಯರು ಮುಂಜಾನೆಯಿಂದಲೇ ಹೋಟೆಲ್ ಮುಂದೆ ಜಮಾಯಿಸಿದ್ದು ಗಂಟೆಗಳು ಕಳೆದಂತೆ ಬಿರಯಾನಿ ಪ್ರಿಯರ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಬರಬೇಕಾಯಿತು. ಬಿರಿಯಾನಿ ಮುಗಿದು ಹೋದರೆ ನಮಗೆ ಬಿರಿಯಾನಿ ಸಿಗಲಾರದು ಎಂದು ಕಂಡ ಕಂಡಲ್ಲಿ ತಾವು ಬಂದ ವಾಹನವನ್ನು ಪಾರ್ಕ್ ಮಾಡಿದ ಜನ ಹೋಟೆಲ್ ಗೆ ಮುಗಿಬಿದ್ದಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕಂಡ ಕಂಡ ಕಡೆಯಲ್ಲಿ ವಾಹನ ನಿಲ್ಲಿಸಿದವರ ಮೇಲೆ ಪೊಲೀಸರು 200 ರಿಂದ 250 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಕೆಲಕಾಲ ಹೋಟೆಲ್ ನ್ನು ಬಂದ್ ಮಾಡಿಸಬೇಕಾದ ಸನ್ನಿವೇಶವೂ ನಿರ್ಮಾಣವಾಯಿತು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Rs.1 #biryani offer creates flutter in #Karimnagar, despite the scorching sun, a huge number of people gathered, on Saturday.
The Empire Hotel was promised to provide biryani, who brought ₹ 1 note and only one biryani per head, as its opening offer.#Telangana #BiryaniRs1 pic.twitter.com/fcBGj4x7Ym— Surya Reddy (@jsuryareddy) June 17, 2023