ಭಾರತೀಯ ಕಂಪೆನಿಗಳ 7 ಕೆಮ್ಮಿನ ಸಿರಪ್‌ ವಿಷಕಾರಿ – ವಿಶ್ವ ಆರೋಗ್ಯ ಸಂಸ್ಥೆ

ಮಂಗಳೂರು: ಭಾರತದಲ್ಲಿ ತಯಾರಾಗಿರುವ ಕನಿಷ್ಠ ಏಳು ಕೆಮ್ಮು ಸಿರಪುಗಳು ವಿಷಕಾರಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 300ಕ್ಕೂ ಅಧಿಕ ಸಾವಿಗೆ ಕಾರಣವಾಗಿವೆ ಎಂದು ಹೇಳಲಾಗಿರುವ ಔಷಧಿಗಳ ಬಗ್ಗೆ ನಡೆಸಲಾದ ತನಿಖೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಣಯಕ್ಕೆ ಬಂದಿದೆ.

ಭಾರತ ಮತ್ತು ಇಂಡೋನೇಷ್ಯಾ ಗಳ 15 ಕಂಪನಿಗಳು ತಯಾರಿಸಿರುವ 20 ಔಷಧಿಗಳನ್ನು ವಿಷಕಾರಿ ಎಂಬುದಾಗಿ ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಮೆಯರ್ ಹೇಳಿದ್ದಾರೆ. ಈ 20 ಔಷಧಿಗಳಲ್ಲಿ ಕೆಮ್ಮು ಸಿರಪ್ ಗಳು, ಪ್ಯಾರಾಸಿಟಮಾಲ್ ಮತ್ತು ವಿಟಮಿನ್ ಗಳು ಸೇರಿವೆ. ಇದರಲ್ಲಿ ಸಿರಪ್ ಗಳ ಸಂಖ್ಯೆ 15 ಆಗಿದ್ದು, ಈ ಪೈಕಿ ಏಳು ಸಿರಪ್ ಗಳನ್ನು ಹರಿಯಾಣದ ಮೇಡನ್ ಫಾರ್ಮ್ಯಾಸ್ಯೂಟಿಕಲ್ಸ್, ನೋಯ್ಡಾದ ಮರಿಯೊನ್‌ ಬಯೋಟೆಕ್ ಮತ್ತು ಪಂಜಾಬ್ ನ ‌ಕ್ಯೂಪಿ ಫಾರ್ಮಾಕೆಮ್ ಕಂಪನಿಗಳು ತಯಾರಿಸಿವೆ.  ವಿಷಯುಕ್ತ ಕೆಮ್ಮುಸಿರಪ್ ಗಳಿಂದ ಉದ್ಭವಿಸಿರುವ ಜಾಗತಿಕ ಬೆದರಿಕೆ ಬಗ್ಗೆ ತಾನು ತನಿಖೆ ನಡೆಸುತ್ತಿರುವುದಾಗಿ ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು.

LEAVE A REPLY

Please enter your comment!
Please enter your name here