ಟೈಟನ್‌ ಜಲಾಂತರ್ಗಾಮಿ ನಾಪತ್ತೆಯಾದ ಸ್ಥಳದಲ್ಲಿ ಕೇಳಿ ಬರುತ್ತಿದೆ ಬಡಿಯುವ ಶಬ್ಧ!

ಮಂಗಳೂರು: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲೆಂದು ತೆರಳಿ ನಾಪತ್ತೆಯಾಗಿರುವ ಜಲಾಂತರ್ಗಾಮಿ ನೌಕೆ ಟೈಟನ್‌ ನಲ್ಲಿ ಇರುವವರು ಜೀವಂತವಾಗಿರಬಹುದೆಂಬ ಕುರುಹುಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿರುವ ತಂಡಗಳಿಗೆ ಸಿಕ್ಕಿದೆ. ಈ ಜಲಾಂತರ್ಗಾಮಿ ಹಡಗಿನಲ್ಲಿ ಐದು ಜನರಿದ್ದರು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಹಡಗಿನಲ್ಲಿರುವವರಿಗೆ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ಧ ಕೇಳಿಸುತ್ತಿದೆ ಎಂದು ತಿಳಿದುಬಂದಿದೆ.

ಆರ್ಕಾ ಗಾತ್ರದ ಈ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಹಚ್ಚಲು ಅಮೆರಿಕಾದ ಕೋಸ್ಟ್ ಗಾರ್ಡ್ ಕೆನಡಾದ ಜಂಟಿ ರಕ್ಷಣಾ ಕೇಂದ್ರದ ತಂಡ ಹಾಗೂ ಫ್ರಾನ್ಸ್ ನಿಂದ ಹಡಗುಗಳು ಆಗಮಿಸಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಕ್ಸ್ ಪ್ಲೋ‌ರರ್ಸ್ ಕ್ಲಬ್ ನೀಡಿದ ಮಾಹಿತಿಯಂತೆ ನೀರಿನೊಳಗಿನಿಂದ ಬಡಿಯುವ ಸದ್ದು ಈ ಜಲಾಂತರ್ಗಾಮಿ ನಾಪತ್ತೆಯಾದ ಸ್ಥಳದ ಸಮೀಪದಿಂದ ಕೇಳಿಸುತ್ತಿದೆ.

ಈ ಜಲಾಂತರ್ಗಾಮಿಯಲ್ಲಿದ್ದ 5 ಮಂದಿಯ ಬಳಿ ಇರುವ ಆಮ್ಲಜನಕ 24 ಗಂಟೆಗೂ ಕಡಿಮೆ ಅವಧಿಗೆ ಸಾಕಾಗಬಹುದು ಎಂದು ಅಮೆರಿಕದ ಕೋಸ್ಟ್ ಗಾರ್ಡ್ ಹೇಳಿದೆ. ತುರ್ತು ಸಂದರ್ಭದಲ್ಲಿ 96 ಗಂಟೆಗಳ ತನಕ ಸಾಕಾಗುವ ಆಮ್ಲಜನಕ ಹೊಂದಲು ಈ ಜಲಾಂತರ್ಗಾಮಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಮಿಷನ್ ನಡೆಸುತ್ತಿದ್ದ ಓಶಿಯನ್ ಗೇಟ್ ಎಕ್ಸ್ಪೆಡಿಶನ್ಸ್ ಈ ರಕ್ಷಣಾ ಕಾರ್ಯಚರಣೆಯ ಭಾಗವಾಗಿದೆ ಹಾಗೂ ಅದನ್ನು ಮುನ್ನಡೆಸುತ್ತಿದೆ.

ಕಾರ್ಬನ್ ಫೈಬರ್ ಮತ್ತು ಟೈಟಾನಿಯಮ್ ನಿಂದ ನಿರ್ಮಿತ 6.7 ಮೀಟರ್ ಉದ್ದದ ಜಲಾಂತರ್ಗಾಮಿಯನ್ನು ಪತ್ತೆ ಹಚ್ಚಲು ವೈಮಾನಿಕ ಶೋಧಗಳು ವಿಫಲವಾಗಿವೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here