ಶಿಶು ಮಂದಿರದಲ್ಲಿ ಎಳೇ ಮಕ್ಕಳ ಡಿಶುಂ…. ಡಿಶುಂ….. ವಿಡಿಯೋ ವೈರಲ್

ಬೆಂಗಳೂರು: ನಗರದ ಚಿಕ್ಕಲಸಂದ್ರದ ಡೇ ಕೇರ್ ಸೆಂಟರ್​ನಲ್ಲಿ ಇಬ್ಬರು ಕಂದಮ್ಮಗಳು ಹೊಡೆದಾಟ ನಡೆಸಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬಾಲಕನೊಬ್ಬ ತನಗಿಂತ ಚಿಕ್ಕ ವಯಸ್ಸಿನ ಬಾಲಕಿಗೆ ಹೊಡೆದಿದ್ದಾನೆ.

ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ, ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದರೂ ಮಕ್ಕಳನ್ನು ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ. ಟ್ವೀಟ್ ಮೂಲಕ ಬಂದಿರುವ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು, ‘ಘಟನೆ ನಡೆದಿರುವ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಗೆ ನಿಮ್ಮ ದೂರು ವರ್ಗಾಯಿಸಲಾಗಿದೆ. ಅಲ್ಲಿಯ ಪೊಲೀಸರು ನಿಮ್ಮನ್ನು ಸಂಪರ್ಕಿಸಲಿದ್ದಾರೆ. ದೂರು ನೀಡಿ’ ಎಂದಿದ್ದಾರೆ. ಆದರೆ, ಶುಕ್ರವಾರ ರಾತ್ರಿಯರೆಗೂ ಯಾವುದೇ ದೂರು ದಾಖಲಾಗಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://embed.indiatoday.in/share/video/embed/7359

LEAVE A REPLY

Please enter your comment!
Please enter your name here