ಕಾಳಿಂಗ ಸರ್ಪ (Ophiophagus Hannah)
ಮಕ್ಕಳಿಗಾಗಿ ವಿಶೇಷ ಮಾಹಿತಿ
ಕಾಳಿಂಗ ಸರ್ಪದ ತಲೆಯು ವಿಶಾಲವಾಗಿದ್ದು ಮುಖಭಾವವು ಸಂಕುಚಿತವಾಗಿದ್ದು ಅಪಾಯ ಬಂದಾಗ ಹೆಡೆಯೆತ್ತಿ ನಿಲ್ಲುತ್ತದೆ.
ಹಾವಿನ ಮೈಬಣ್ಣವು ವಿಶಿಷ್ಟವಾದ ಕಂದು ಬಣ್ಣ ಅಥವಾ ಕಪ್ಪು ಬಣ್ಣವಾಗಿದ್ದು, ದೇಹದ ಹಿಂದಿನ ಭಾಗದಲ್ಲಿ ಬಿಳಿ ಅಥವಾ ಹಳದಿ ಪಟ್ಟೆಗಳಿದ್ದು ಉದ್ದವಾಗಿ ಹಿಂಭಾಗದಲ್ಲಿ ಕಂಡುಬರುತ್ತದೆ. ವಯಸ್ಸಾದಂತೆ ಈ ಪಟ್ಟೆಗಳ ಬಣ್ಣವು ಮಾಸುತ್ತದೆ ಅಥವಾ ಇಲ್ಲವಾಗುತ್ತದೆ. ಕೆಲವು ಹಾವುಗಳಲ್ಲಿ ಬಣ್ಣವು ಜೀವಮಾನವಿಡಿ ಇರುತ್ತದೆ.
ಅಪಾಯ ಸಮಯದಲ್ಲಿ ಹೆಚ್ಚಿನ ಬುಸುಗುಡುವಿಕೆಯನ್ನು ಗಮನಿಸಿದಾಗ ಕಾಳಿಂಗ ಸರ್ಪವು ಕೋಪಗೊಂಡಾಗ ವಿಶಿಷ್ಟವಾಗಿ ಬುಸುಗುಡುತ್ತದೆ ಎಂಬುದನ್ನು ಗಮನಿಸಬಹುದು.
ಕಾಳಿಂಗ ಸರ್ಪವು ಹಗಲಿನಲ್ಲಿ ಹೆಚ್ಚು ಚುರುಕಾಗಿರುತ್ತದೆ. ತನ್ನ ಆಹಾರವನ್ನು ಬೇಟೆಯಾಡುವಾಗ ಗಿಡಗಳ ಮಧ್ಯದಲ್ಲಿ, ನೀರಿನಲ್ಲಿ ವೇಗವಾಗಿ ಚಲಿಸುತ್ತದೆ. ಈ ತಳಿಗಳ ಆಹಾರವು ಪ್ರಮುಖವಾಗಿ ಚಿಕ್ಕ ಹಾವು, ಚಿಕ್ಕ ಹೆಬ್ಬಾವು, ನಾಗರಹಾವು, ಇಲಿಗಳು, ಹಲ್ಲಿ, ಉಡಗಳು, ಹೆಡೆಯಿಂದ ಬೇಟೆಗೆ ಹೊಡೆದಾಗ ವಿಷವು ಹರಡಿ ಉಸಿರಾಟವು ನಿಲ್ಲುತ್ತದೆ.
ಜನವರಿಯಿಂದ ಮಾರ್ಚ್ ವರೆಗೆ ಹಾವುಗಳಲ್ಲಿ ಮಿಲನವು ನಡೆಯುತ್ತದೆ. ಹೆಣ್ಣುಗಳು ಸ್ರವಿಸುವ ರಾಸಾಯನಿಕದಿಂದ ಗಂಡುಗಳು ಆಕರ್ಷಿತವಾಗುತ್ತವೆ. ಸಮಾಗಮಕ್ಕಾಗಿ ಗಂಡುಗಳು ಹೆಣ್ಣಿನ ದೇಹಕ್ಕೆ ತಲೆಯಿಂದ ತಿಕ್ಕುವುದು, ಇರಿಯುವುದು, ತಿಳಿಯುವುದು, ಮುಂತಾದ ಕ್ರಿಯೆಗಳನ್ನು ಮಾಡುತ್ತವೆ. ಕೆಲವು ಸಲ ಸಮಾಗಮಕ್ಕಾಗಿ ಗಂಡು ಹಾವುಗಳಲ್ಲಿ ಹೋರಾಟ ನಡೆಯುತ್ತದೆ. ಸಮಾಗಮದಲ್ಲಿ ಹಾವುಗಳ ಪರಸ್ಪರ ತಳಕು ಹಾಕಿಕೊಳ್ಳುತ್ತದೆ. ಈ ಸ್ಥಿತಿಯಲ್ಲಿ ಅವು ಹಲವಾರು ಗಂಟೆಗಳು ಇರುತ್ತವೆ. ಹೆಣ್ಣು ಹಾವುಗಳು 20 ರಿಂದ 50 ಮೊಟ್ಟೆಗಳನ್ನು ಇಡುತ್ತದೆ. ಮರಿ ಹಾವುಗಳಲ್ಲಿ ಸಹ ವಿಷವು ದೊಡ್ಡ ಹಾವುಗಳಲ್ಲಿ ಇರುತ್ತದೆ.