ದಂಪತಿ ಜಗಳ ಸಾವಿನಲ್ಲಿ ಅಂತ್ಯ – ಅನಾಥರಾದ ಮಕ್ಕಳು

ಮಂಗಳೂರು(ಕಾರ್ಕಳ): ಕ್ಷುಲ್ಲಕ ವಿಚಾರಕ್ಕಾಗಿ ದಂಪತಿ ಮಧ್ಯೆ ಜಗಳವಾಗಿದ್ದು, ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಕಾರ್ಕಳ ತಾಲೂಕು ನಲ್ಲೂರಿನಲ್ಲಿ ವರದಿಯಾಗಿದೆ. ಯಲ್ಲಾಪುರ ಮೂಲದ ಇಮ್ಯಾನುಲ್‌ ಸಿದ್ದಿ (40) ಹಾಗೂ ಯಶೋಧಾ (32) ಎಂಬವರೇ ಸಾವಿಗೀಡಾದ ದಂಪತಿಗಳು.

ಜೂ.25 ರಂದು ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿಗಳ ಮಧ್ಯೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಶೋಧಾರನ್ನು ರಕ್ಷಿಸಲು ಬಾವಿಗೆ ಹಾರಿದ್ದ ಪತಿ ಇಮ್ಯಾನುಲ್‌ ಕೂಡ ಸಾವನ್ನಪ್ಪಿದ್ದಾರೆ. ಕಳೆದ ಎರಡು ವರ್ಷಗಳಿಂದ ಇಮ್ಯಾನುಲ್‌, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ 10 ವರ್ಷದ ಮಗ ಹಾಗೂ 9 ವರ್ಷದ ಮಗಳು ಅನಾಥರಾಗಿದ್ದಾರೆ.

ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ತೇಜಸ್ವಿ, ಪೊಲೀಸರಾದ ಪ್ರಕಾಶ್‌, ಸುಭಾಶ್‌ ಕಾಮತ್‌, ಸುಂದರ ಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

LEAVE A REPLY

Please enter your comment!
Please enter your name here