ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ಮಂಗಳೂರು(ಧಾರವಾಡ): ಧಾರವಾಡ ಹಾಗೂ ಬೆಂಗಳೂರಿನ ನಡುವೆ ಸಂಚರಿಸಲಿರುವ ಒಟ್ಟು 5 ವಂದೇ ಭಾರತ್ ಎಕ್ಸಪ್ರೆಸ್ ರೈಲುಗಳಿಗೆ ಇಂದು ಪ್ರಧಾನಿ ಮೋದಿ ಭೋಪಾಲ್ ನಿಂದ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಧಾರವಾಡದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ್ದಾರೆ. ಚಾಲನೆ ಸಿಕ್ಕ ನಂತರ ತನ್ನ ಮೊದಲ ಪ್ರಯಾಣದ ಭಾಗವಾಗಿ ಬೆಂಗಳೂರಿಗೆ ರೈಲು ಹೊರಟಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಪಾಲರ ಥಾವರಚಂದ್ ಗೆಹ್ಲೋಟ್ “ರೈಲಿನ ಆಧುನಿಕತೆಯಲ್ಲಿ ಭಾರತ ರೈಲ್ವೆ ಈಗ ಮುಂದೆ ಇದೆ. ದೇಶವನ್ನು ಒಂದೇ ಸೂತ್ರದಡಿ ಜೋಡಿಸುವ ಕೆಲಸ ಭಾರತದ ರೈಲ್ವೆ ಮಾಡುತ್ತಿದೆ. ಭಾರತದ ಐಕ್ಯತೆಗೆ ರೈಲ್ವೆ ಕೊಡುಗೆ ಅಪಾರವಾಗಿದೆ. ವಂದೇ ಭಾರತ ರೈಲು ರಾಷ್ಟ್ರೀಯ ಗೌರವದ ಪ್ರತೀಕವಾಗಿದ್ದು ಮೇಕ್ ಇನ್ ಇಂಡಿಯಾದ ವಚನವನ್ನು ಈಡೇರಿಸಿದ್ದಕ್ಕೆ ಇದು ಉದಾಹರಣೆ. ಕರ್ನಾಟಕದಲ್ಲಿಯೂ ರೈಲ್ವೆ ವಿಕಾಸದಲ್ಲಿ ಬೆಳವಣಿಗೆ ಆಗುತ್ತಿದೆ. ದೇಶದಲ್ಲಿ ಸಂಪರ್ಕ ಬೆಳೆಸುವಲ್ಲಿ ಕೇಂದ್ರ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತಿದೆ.” ಎಂದು ಮಾತನಾಡಿದರು.

LEAVE A REPLY

Please enter your comment!
Please enter your name here