ಮಂಗಳೂರು/ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಜೂ. 30 ರೊಳಗೆ ಶರಣಾಗುವಂತೆ ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಸುಳ್ಯ ನಗರ ವ್ಯಾಪ್ತಿಯಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕವಾಗಿ ಉದ್ಘೋಷಣೆ ಮಾಡಿದ ಎನ್‌ಐಎ ಅಧಿಕಾರಿಗಳು ಮತ್ತು ಸುಳ್ಯ ಪೊಲೀಸ್ ಸಿಬ್ಬಂದಿಗಳು ಜೂ. 30 ರೊಳಗಾಗಿ ಸಂಬಂಧಪಟ್ಟ ಆರೋಪಿಗಳು ಎನ್ ಐಎ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಶರಣಾಗಬೇಕು, ತಪ್ಪಿದ್ದಲ್ಲಿ ಸದ್ರಿ ಆರೋಪಿಗಳ ಮನೆಯನ್ನು ಜಪ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ. ಆರೋಪಿಗಳ ಮಾಹಿತಿ ನೀಡಿದ್ದಲ್ಲಿ ಅವರಿಗೆ ಬಹುಮಾನ ನೀಡಲಾಗುವುದು ಮತ್ತು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿ ಮಾಡಲಾಗಿದೆ.
ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೆ ತೆರಳಿದ ಅಧಿಕಾರಿಗಳು ನ್ಯಾಯಾಲಯದ ಆದೇಶದ ಪ್ರತಿಯನ್ನುಮನೆಯ ಗೋಡೆಗೆ ಅಂಟಿಸಿದ್ದಾರೆ. ನಿನ್ನೆ ಜೂ.27ರಂದು ದ.ಕ ಮತ್ತು ಕೊಡಗಿನ 6 ಕಡೆಗಳಲ್ಲಿಎನ್ ಐಎ ದಾಳಿ ನಡೆಸಿ ಆರೋಪಿಗಳಿಗಾಗಿ ಶೋಧ ನಡೆಸಿತ್ತು. ಬೆಳ್ಳಾರೆಯಲ್ಲಿಯೂ ಧ್ವನಿವರ್ಧಕದ ಮೂಲಕ ಆರೋಪಿಗಳ ಶರಣಾಗತಿಗೆ ಕರೆ ನೀಡಿದ ಎನ್‌ಐಎ ಅಧಿಕಾರಿಗಳು ಆರೋಪಿ ಮುಸ್ತಫ ಮನೆಗೆ ತೆರಳಿ ನ್ಯಾಯಾಲಯದ ಆದೇಶದ ಪ್ರತಿಯನ್ನು ಮನೆಯ ಗೋಡೆಗೆ ಅಂಟಿಸಿ ಮನೆ ಮಂದಿಗೆ ಮಾಹಿತಿ ನೀಡಿದ್ದಾರೆ.
ವೀಡಿಯೋಗಾಗಿ ಇಲ್ಲಿಲ ಕ್ಲಿಕ್ ಮಾಡಿ