18 ತಿಂಗಳ ಕಂದನ ಬಿಟ್ಟು ಪ್ರವಾಸಕ್ಕೆ ತೆರಳಿದ ಮಹಾತಾಯಿ- ಅನ್ನ, ನೀರಿಲ್ಲದೆ ಉಸಿರು ಚೆಲ್ಲಿದ ಕಂದ

ಮಂಗಳೂರು: ಒಂದೂವರೆ ವರ್ಷದ ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟು ಪ್ರವಾಸ ಹೋಗಿದ್ದು, ಹತ್ತು ದಿನ ಕಳೆದು ಬಂದಾಗ ಮಗು ಮೃತಪಟ್ಟಿರುವುದು ಕಂಡುಬಂದಿದೆ. ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೆರಿಕಾದ ಓಹಿಯೋ ನಿವಾಸಿ ಕ್ರಿಸ್ಟಲ್(31) ಬಂಧಿತ ಮಹಿಳೆ. ಹತ್ತು ದಿನ ಪ್ರವಾಸ ಹೋಗಲಿಕ್ಕಿದೆ ಹೀಗಾಗಿ ಮಗುವನ್ನು ನೋಡಿಕೊಳ್ಳಿ ಎಂದು ನೆರೆಮನೆಯವರಿಗೆ ಸ್ವಲ್ಪ ದಿನಗಳಿಗೆ ಮೊದಲು ಆಕೆ ಹೇಳಿದ್ದಳು. ಆದರೆ ಪ್ರವಾಸ ಹೊರಡುವಾಗ ಆಕೆ ಯಾರಿಗೂ ಕರೆ ಮಾಡಿರಲಿಲ್ಲ. ಹೀಗಾಗಿ ನೆರೆಮನೆಯವರು ಆಕೆ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ ಮನೆಯಲ್ಲಿ ಒಂಟಿಯಾಗಿದ್ದ ಮಗು ಹಸಿವಿನಿಂದ ಮೃತಪಟ್ಟಿದೆ. ಕ್ರಿಸ್ಟಲ್ ಪ್ರವಾಸದಿಂದ ತಿರುಗಿ ಬಂದಾಗ ಮಗು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಕ್ರಿಸ್ಟಲ್ ಮಗುವನ್ನು ಹೀಗೆ ಒಂಟಿಯಾಗಿ ಬಿಟ್ಟು ಪ್ರವಾಸಕ್ಕೆ ಹೋಗುವುದು ಇದು ಮೊದಲ ಬಾರಿಯೇನಲ್ಲ ಅನೇಕ ಸಲಾ ಮಗುವನ್ನು ಬಿಟ್ಟು ಹೋಗಿದ್ದಾಳೆ. ಹಾಗೆ ಮಾಡದಂತೆ ಬಹಳಷ್ಟು ಸಲ ಆಕೆಗೆ ಹೇಳಿದ್ದೇವೆ. ಆದರೆ ಆಕೆ ನಮ್ಮ ಮಾತು ಕೇಳುತ್ತಿರಲಿಲ್ಲ ಎಂದು ನೆರೆಮನೆಯವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here