ಪ್ರಾಣೆ ಪ್ರಪಂಚ – 14

ಭಾರತದ ಆನೆ (Elephas maximus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಏಷಿಯಾ ಖಂಡದಲ್ಲಿ ಗೋಚರಿಸುವ 3 ಪ್ರಮುಖ ಆನೆಗಳ ಪಂಡಗಳ ಪೈಕಿ ನಮ್ಮ ದೇಶದ ಆನೆ ಕೂಡ ಒಂದಾಗಿದೆ. ಆನೆಗಳು ಒಟ್ಟು 60-75 ವರ್ಷಗಳ ಆಯುಷ್ಯವನ್ನು ಹೊಂದಿವೆ. ಗಂಡಾನೆಗಳು ಎತ್ತರವಾಗಿ ಬಲಿಷ್ಠವಾಗಿ ಇರುತ್ತದೆ. ಹೆಣ್ಣಾನೆಗಳು ಗಂಡಾನೆಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ. ಗಂಡಾನೆಗೆ ಹೋಲಿಸಿದರೆ ಚಿಕ್ಕ ದಂತಗಳನ್ನು ಹೊಂದಿರುತ್ತದೆ ಅಥವಾ ದಂತಗಳು ಇಲ್ಲದೆಯೂ ಇರಬಹುದು.

ನಮ್ಮ ದೇಶದ ಆನೆ ಸುಮಾರು 7 ರಿಂದ 11.5 ಅಡಿ ಎತ್ತರ ಹೊಂದಿರುತ್ತದೆ. 19 ಪಕ್ಕೆಲುಬುಗಳನ್ನೊಳ ಗೊಂಡಿರುತ್ತದೆ. 2000 ದಿಂದ 5000 ಸಾವಿರ ಕೆ.ಜಿ ತೂಕವಿರುತ್ತದೆ.

ಭಾರತದ ಆನೆಗಳು ಆಫ್ರಿಕಾದ ಆನೆಗಳಿಗೆ ಹೋಲಿಸಿದರೆ ಚಿಕ್ಕ ಕಿವಿಗಳನ್ನು ಹೊಂದಿರುತ್ತದೆ. ಭಾರತದ ಆನೆಗಳ ದೇಹದ ಆಕಾರ ರಚನೆಯು ಅವುಗಳ ತೂಕಕ್ಕೆ ಸರಿಸಮವಾಗಿದೆ. ಆನೆಗಳು ಹಿಂಡು ಹಿಂಡಾಗಿ ಸಾಗುತ್ತವೆ. ಉತ್ತಮ ಕುಟುಂಬ ಜೀವನ ಶೈಲಿಯನ್ನು ಪ್ರದರ್ಶಿಸುತ್ತವೆ.

 

LEAVE A REPLY

Please enter your comment!
Please enter your name here