ವಕೀಲರ ಸೇವೆ ವಾಣಿಜ್ಯ ಚಟುವಟಿಕೆಯಲ್ಲ, ತೆರಿಗೆ ವಿಧಿಸುವಂತಿಲ್ಲ – ದೆಹಲಿ ಹೈಕೋರ್ಟ್

ಮಂಗಳೂರು: ವಕೀಲರು ತಮ್ಮ ಕಕ್ಷಿದಾರರಿಗೆ ನೀಡುವ ವೃತ್ತಿಪರ ಸೇವೆಯನ್ನು ವಾಣಿಜ್ಯತ್ಮಕವಾಗಿ ನೋಡುವಂತಿಲ್ಲ. ಹಾಗಾಗಿ ವಕೀಲರ ಶುಲ್ಕಕ್ಕೆ ವಾಣಿಜ್ಯ ಸಂಸ್ಥೆ ವರ್ಗದಡಿ ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ನೀಡಿದೆ.‌

ನ್ಯಾಯಮೂರ್ತಿ ನಜ್ಮಿ ವಜೀರಿ ಹಾಗೂ ಸುಧೀರ್ ಕುಮಾರ್ ಜೈನ್ ಅವರಿದ್ದ ದೆಹಲಿ ಹೈಕೋರ್ಟ್ ನ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. 2015ರ ಜನವರಿಯಲ್ಲಿ ದೆಹಲಿ ಹೈಕೋರ್ಟ್ ನ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯ ಪೀಠ ಇತ್ಯರ್ಥಗೊಳಿಸಿದೆ.

ವಕೀಲರ ವೃತ್ತಿಪರ ಸೇವೆಯು ವಾಣಿಜ್ಯ ಚಟುವಟಿಕೆಯಲ್ಲ ಮತ್ತು ವೃತ್ತಿ ಶುಲ್ಕಕ್ಕೆ ವಾಣಿಜ್ಯ ತೆರಿಗೆ ವಿಧಿಸುವಂತಿಲ್ಲ ಎಂದು ತೆರಿಗೆ ಕಾಯ್ದೆಯನ್ನು ಉಲ್ಲೇಖಿಸಿದ ನ್ಯಾಯಪೀಠ, ಏಕ ಸದಸ್ಯಪೀಠ ನೀಡಿದ್ದ ತೀರ್ಪಿಗೆ ಮಧ್ಯಪ್ರವೇಶ ಮಾಡುವ ಯಾವುದೇ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ವೃತ್ತಿಪರ ಚಟುವಟಿಕೆಯನ್ನು ವಾಣಿಜ್ಯ ಚಟುವಟಿಕೆ ಎಂದು ಕಾನೂನಿನಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ವಕೀಲರನ್ನು ಕಮರ್ಷಿಯಲ್ ಟ್ಯಾಕ್ಸ್ ಅಡಿ ತೆರಿಗೆ ವ್ಯಾಪ್ತಿಗೆ ಸೇರಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

LEAVE A REPLY

Please enter your comment!
Please enter your name here