ತಂಪುಪಾನೀಯಗಳಲ್ಲಿ ಕ್ಯಾನ್ಸರ್‌ಕಾರಕ ಸಿಹಿ – ಘೋಷಣೆ ಮಾಡಲಿರುವ ವಿಶ್ವ ಆರೋಗ್ಯ ಸಂಸ್ಥೆ

ಮಂಗಳೂರು(ನವದೆಹಲಿ): ಕೋಕಾ ಕೋಲಾ ಡಯಟ್ ಸೋಡಾಗಳಿಂದ ಹಿಡಿದು ಮಾರ್ಸ್ ನ ಎಕ್ಸ್ ಟ್ರಾ ಚೂಯಿಂಗ್ ಗಮ್ ಮತ್ತು ಕೆಲವು ಪಾನೀಯಗಳಲ್ಲಿ ಬಳಸಲಾಗುವ ವಿಶ್ವದ ಅತ್ಯಂತ ಸಾಮಾನ್ಯ ಕೃತಕ ಸಿಹಿಕಾರಕವನ್ನು ಜಾಗತಿಕ ಆರೋಗ್ಯ ಸಂಸ್ಥೆಗಳು ಕ್ಯಾನ್ಸರ್ ಕಾರಕ ಎಂದು ಘೋಷಿಸಲು ಸಿದ್ಧತೆ ನಡೆಸಿದೆ.

ಹಲವಾರು ಪಾನೀಯಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುವ ಆಸ್ಪರ್‌ ಟೇಮ್ ಎನ್ನುವ ಸಿಹಿಕಾರಕ ಮನುಷ್ಯರಲ್ಲಿ ಕ್ಯಾನ್ಸರ್ ಉಂಟಾಗಲು ಕಾರಣವಾಗುತ್ತದೆ ಎಂದು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ವಿಭಾಗವು ಜುಲೈನಲ್ಲಿ ಘೋಷಿಸಲಿದೆ ಎಂದು ರಾಯಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಸ್ಪರ್‌ ಟೇಮ್ ಬಳಕೆಯ ಬಗ್ಗೆ ಹಲವಾರು ವರ್ಷಗಳಿಂದ ಅಧ್ಯಯನ ನಡೆಯುತ್ತಿದೆ. ಫ್ರಾನ್ಸ್ ನಲ್ಲಿ ನಡೆದ ಅಧ್ಯಯನದಲ್ಲಿ ಆಸ್ಪರ್‌ ಟೇಮ್ ಮತ್ತು ಇತರ ಕೃತಕ ಸಿಹಿ ಪದಾರ್ಥಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂದು ತಿಳಿದುಬಂದಿತು. ಈಗ ಅಧಿಕೃತ ಘೋಷಣೆಗೆ ಸಿದ್ಧತೆ ನಡೆಯುತ್ತಿದ್ದು‌, ಇದು ವಿಶ್ವದ ಆಹಾರ ಮತ್ತು ಪಾನೀಯ ಉದ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಲಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here