ಪ್ರಾಣಿ ಪ್ರಪಂಚ -16

ಬಂಗಾಳದ ಗುಳ್ಳೆನರಿ (Vulpes bengalensis)

ಮಕ್ಕಳಿಗಾಗಿ ವಿಶೇಷ ಸಂಚಿಕೆ

ಹಿಮಾಲಯದ ಬೆಟ್ಟದ ತಪ್ಪಲಿನಲ್ಲಿ ನೇಪಾಳದ ಟೆರಾಯಿ ಪ್ರದೇಶದಿಂದ ದಕ್ಷಿಣ ಭಾರತದವರೆಗೂ ಪೂರ್ವ ಪಾಕಿಸ್ತಾನದಿಂದ ಬಾಂಗ್ಲಾದೇಶದವರೆಗೂ ಅಂದರೆ ಹೆಚ್ಚಾಗಿ ಭಾರತ ಉಪಖಂಡದಲ್ಲಿ ಈ ನರಿಯನ್ನು ಕಾಣಬಹುದು. ಹೆಚ್ಚಾಗಿ ತೇವ ಪ್ರದೇಶಗಳನ್ನು ಬಿಟ್ಟು ಹುಲ್ಲುಗಾವಲು, ಮುಳ್ಳು ಕಾಡು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಸಣ್ಣ ದೇಹ ರಚನೆ, ಉದ್ದ ಮೂಗು, ಮೂತಿ, ಕಪ್ಪು ತುಟಿಗಳು, ಮೊನಚಾದ ಕಿವಿಗಳು, ಕಡು ಕಂದು ಬಣ್ಣದ ಕಿವಿಯ ಹಿಂಬದಿಯ ಮೇಲೆ ಕಪ್ಪು ಬರೆ, ಕಣ್ಗಳ ಮುಂಭಾಗದಲ್ಲಿ ಕಪ್ಪು ಕುರುಚಲು ಕೂದಲು, ಒರಟಾದ ಕಂದು ಬಣ್ಣದ ಕಾಲ್ಗಳು, ಹೆಚ್ಚು ರೋಮ ಗಳನ್ನೊಳಗೊಂಡ ದಟ್ಟವಾದ ಬಾಲ ಕಪ್ಪು ತುದಿಯನ್ನೊಳಗೊಂಡಿರುತ್ತದೆ.

2.3-4.1 ಕೆ.ಜಿ ತೂಕ ಹೊಂದಿದ್ದು, 10 ಇಂಚು (25 ಸೆಂ.ಮೀ) ಉದ್ದದ ಬಾಲ ಇರುತ್ತದೆ. ಸಾಮಾನ್ಯವಾಗಿ ಕಂದು ಅಥವಾ ಬೂದು ಬಣ್ಣ ಇರುತ್ತದೆ. ಎದೆ, ಕಾಲ್ಗಳ ಭಾಗದಲ್ಲಿ ದೇಹದ ಬಣ್ಣ ತಿಳಿಯಾಗಿರುತ್ತದೆ. ಉದ್ದ ಚೂಪಾದ ಕೋರೆ ಹಲ್ಲುಗಳನ್ನು ಹೊಂದಿರುತ್ತದೆ. 18 ಇಂಚು ಉದ್ದವಿರುತ್ತದೆ-ತಲೆ ಹಾಗೂ ದೇಹದ ಅಳತೆ.

ಇಳಿಜಾರು ಹಾಗೂ ಎತ್ತರವಾದ ಹುಳ್ಳುಗಾವಲಿನಲ್ಲೂ ಇರುವುದಿಲ್ಲ. ಸಮತಟ್ಟಾದ ಚಿಕ್ಕ ಹುಲ್ಲುಗಾವಲಿನಲ್ಲಿ ಗುಂಪುಗಳಲ್ಲಿ ಕಾಣಿಸಿಕೊಳ್ಳುತ್ತದೆ.

LEAVE A REPLY

Please enter your comment!
Please enter your name here