ಗೋ ಮಾಂಸ ರಫ್ತು ನಿಲ್ಲಿಸುವ ಬೇಡಿಕೆ ಪ್ರಧಾನಿ ಮುಂದಿಡುವುದಾದರೆ ಸಂತರ ನಿಯೋಗದಲ್ಲಿ ಮುಸ್ಲಿಮರು ಭಾಗವಹಿಸಲಿದ್ದಾರೆ-ಅಶ್ರಫ್

ಮಂಗಳೂರು: ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯದಿದ್ದರೆ ಪ್ರಧಾನಿ ಮತ್ತು ರಾಜ್ಯಪಾಲರನ್ನು ಭೇಟಿ ಮಾಡುವುದಾಗಿ  ಹೇಳಿರುವ ದಕ್ಷಿಣ ಕನ್ನಡದ ಸಂತರ/ಸ್ವಾಮೀಜಿಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್, ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುವ ಗೋಮಾಂಸ ವ್ಯವಹಾರವನ್ನು ಸ್ಥಗಿತ ಗೊಳಿಸುವ ಬೇಡಿಕೆಯನ್ನು ರಾಜ್ಯಪಾಲರು‌ ಮತ್ತು ಪ್ರಧಾನಿಯ ಮುಂದೆ ಇಡುವುದಾದರೆ ನಿಯೋಗದಲ್ಲಿ ಮುಸ್ಲಿಮರು ಭಾಗಿಗಳಾಗುತ್ತೇವೆ ಎಂದು ಹೇಳಿದ್ದಾರೆ.

ಸಂತರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಬದಲಾದ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಮಂಗಳೂರಿನ ‘ ಸಂತರು ‘ ಮತ್ತು ಧಾರ್ಮಿಕ ಮುಖಂಡರು ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಗೋಹತ್ಯೆ ಮತ್ತು ಮತಾಂತರ ಕಾಯ್ದೆಯ ವಿಷಯ ಪ್ರಸ್ತಾಪಿಸಿ ರಾಜ್ಯಪಾಲರು ಮತ್ತು ಪ್ರಧಾನಿ ಮೋದಿ ಬಳಿ ನಿಯೋಗ ತೆರಳುವುದಾಗಿ ಸಭೆ ಸೇರಿ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಹಿಂಪಡೆಯಬಾರದು, ಮತಾಂತರ ನಿಷೇದ ಕಾಯ್ದೆ ಪುನರ್ ಸ್ಥಾಪಿಸಬೇಕು. ತಪ್ಪಿದಲ್ಲಿ ಹೋರಾಟ ಮಾಡುತ್ತೇವೆ ಎಂಬಿತ್ಯಾದಿಯಾಗಿ ವಿಶ್ವ ಹಿಂದೂ ಪರಿಷತ್ ಅಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಗಳೂರಿನಲ್ಲಿ ಸಭೆ ಸೇರಿದ ಸಂತರು ಕೇಂದ್ರ ಸರಕಾರದ ಮುಂದೆ ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುವ ಗೋಮಾಂಸ ವ್ಯವಹಾರ ವನ್ನು ಸ್ಥಗಿತ ಗೊಳಿಸುವ ಬೇಡಿಕೆಯನ್ನು ಮಂಗಳೂರಿನ ಸಂತರು ಮಾಡಬೇಕಿದೆ. ಒಂದು ವೇಳೆ ಮಂಗಳೂರಿನ ಸಂತರು ಗೋಮಾಂಸ ರಫ್ತು ನಿಷೇಧ ಬೇಡಿಕೆ ಮುಂದಿಡುವುದಾದರೆ ಮುಸ್ಲಿಮರು ನಿಯೋಗದಲ್ಲಿ ಭಾಗಿಯಾಗಲು ಸಿದ್ಧರಿದ್ದೇವೆ. ಮಂಗಳೂರಿನ ಸಂತರು ಈ ಬೇಡಿಕೆ ಮುಂದಿಡಲಿ ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಸವಾಲು ಹಾಕಿದ್ದಾರೆ.

LEAVE A REPLY

Please enter your comment!
Please enter your name here