ಜು.17, 18 ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆ

ಮಂಗಳೂರು: ಪ್ರತಿ ಪಕ್ಷಗಳ ಮುಂದಿನ ಸಭೆ ಜುಲೈ 17 ಮತ್ತು 18ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವರ್ ಅವರ ಸೋದರಳಿಯ ಅಜಿತ್ ಪವರ್ ಬಂಡಾಯವು ಪ್ರತಿಪಕ್ಷಗಳ ಏಕತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪಕ್ಷ ಹೇಳಿಕೊಂಡ ಬೆನ್ನಲ್ಲೇ ಈ ಪ್ರಕಟನೆ ನೀಡಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಪಾಟ್ನಾ ದಲ್ಲಿ ಅತ್ಯಂತ ಯಶಸ್ವಿಯಾದ ಸರ್ವ ಪಕ್ಷಗಳ ಸಭೆಯ ನಂತರ ನಾವು ಮುಂದಿನ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 17 ಮತ್ತು 18ರಂದು ನಡೆಸುತ್ತೇವೆ ಎಂದು ಘೋಷಿಸಿದರು.

ಫ್ಯಾಸಿಸ್ಟ್ ಮತ್ತು ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳನ್ನು ಸೋಲಿಸಲು ಹಾಗೂ ದೇಶವನ್ನು ಮುಂದಕ್ಕೆ ಕೊಂಡೊಯ್ಯುವ ದಿಟ್ಟ ದೃಷ್ಟಿಯನ್ನು ಪ್ರಸ್ತುತಪಡಿಸುವ ನಮ್ಮ ಸಂಕಲ್ಪದಲ್ಲಿ ನಾವು ಅಚಲರಾಗಿದ್ದೇವೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಅವರು ಇತ್ತೀಚೆಗೆ ಏನ್ ಸಿ ಪಿ ನಾಯಕರ ವಿರುದ್ಧ ಭ್ರಷ್ಟಾಚಾರದ ದೊಡ್ಡ ಆರೋಪ ಮಾಡಿದರು. ಈಗ ನಾವು ಈ ನಾಟಕವನ್ನು ನೋಡಿದ್ದೇವೆ. ಇದು ಇ ಡಿ ಮತ್ತು ಅವರ ಏಜೆನ್ಸಿಗಳ ಸ್ಪಷ್ಟ ಪ್ರಾಯೋಜಿತ ಆಟವಾಗಿದೆ. ಇದು ಮಹಾರಾಷ್ಟ್ರ ಅಘಾಡಿ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ವಿರುದ್ಧ ಇನ್ನಷ್ಟು ಉಗ್ರ ಹೋರಾಟ ಮಾಡುತ್ತೇವೆ. ಇದು ಪ್ರತಿಪಕ್ಷಗಳ ಏಕತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಏನ್‌ಸಿಪಿ ವಿಷಯವಾಗಿದೆ. ಶರದ್ ಪವಾರ್ ಅವರು ಪಕ್ಷದ ಅತ್ಯಂತ ಎತ್ತರದ ನಾಯಕರಾಗಿದ್ದು ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ. ಕೆಲವು ನಾಯಕರು ಪಕ್ಷವನ್ನು ಬದಲಾಯಿಸುತ್ತಾರೆ ಎಂದರೆ ಪಕ್ಷದ ಬೆಂಬಲಿಗರು ಮತ್ತು ಇತರ ಸದಸ್ಯರು ಅವರೊಂದಿಗೆ ಹೋಗುತ್ತಾರೆ ಎಂದು ಅರ್ಥವಲ್ಲ ಎಂದು ವೇಣುಗೋಪಾಲ್ ಹೇಳಿರುವುದಾಗಿ ಎ ಎನ್ ಐ ವರದಿ ಮಾಡಿದೆ.

LEAVE A REPLY

Please enter your comment!
Please enter your name here