ಮಂಗಳೂರು (ಬೆಂಗಳೂರು): ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್ ಕೆ ಮೊಹಮ್ಮದ್ ಶಾಫಿ ಸಅದಿ ಅವರು ಸಲ್ಲಿಸಿದ ರಾಜೀನಾಮೆಯನ್ನು ಸರಕಾರವು ಜುಲೈ 5 ರಂದು ಅಂಗೀಕರಿಸಿದೆ.
ಅತೀ ಶೀಘ್ರದಲ್ಲೇ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ. ವಕ್ಫ್ ಬೋರ್ಡ್ ಸದಸ್ಯರಾಗಿರುವ ಚಿತ್ರದುರ್ಗ ಮೂಲದ ಕೆ ಅನ್ವರ್ ಭಾಷಾ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇನ್ನೊಂದೆಡೆ ವಕ್ಫ್ ಮಂಡಳಿ ನಾಮ ನಿರ್ದೇಶಿತ ಸದಸ್ಯರಾಗಿರುವ ಶಾಸಕ ತನ್ವೀರ್ ಸೇಠ್ ಅವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಆದರೆ ಯಾರ ಆಯ್ಕೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕೃತ ಗೊಂಡಿರುವ ವಕ್ಫ್ ಬೋರ್ಡ್ ಕಚೇರಿ ಕಟ್ಟಡದ ಉದ್ಘಾಟನೆವರೆಗೆ ತಮ್ಮನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅವಕಾಶ ನೀಡುವಂತೆ ಶಾಪಿ ಸಅದಿ ಮನವಿ ಮಾಡಿದ್ದರು. ಜುಲೈ 3 ರಂದು ನವೀಕೃತ ಕಟ್ಟಡ ಉದ್ಘಾಟನೆಯಾಗಿದ್ದು, ಜುಲೈ 5 ರಂದು ಅವರು ಈ ಹಿಂದೆ ನೀಡಿದ್ದ ರಾಜೀನಾಮೆ ಪತ್ರವನ್ನು ಸರಕಾರ ಅಂಗೀಕರಿಸಿದೆ.