ಪ್ರಾಣಿ ಪ್ರಪಂಚ-22

ನರಿ(Canis aureus)

ಮಕ್ಕಳಿಗಾಗಿ ವಿಶೇಷ ಮಾಹಿತಿ

ತೋಳದಂತೆ ಕಾಣುವ ಈ ಗೋಲ್ಡನ್‌ ಜ್ಯಾಕಲ್‌ನ್ನು ಏಷಿಯಾ ಖಂಡದಲ್ಲಿಯೇ ಹೆಚ್ಚಾಗಿ ಕಾಣಬಹುದು. ಗೋಲ್ಡನ್‌ ಜ್ಯಾಕಲ್‌ ಕುಟುಂಬ ಜೀವಿಗಳು, ಗಂಡು ಹೆಣ್ಣು ಮರಿಗಳೊಂದಿಗೆ ಸಾಗುತ್ತಾ ಹೋಗುತ್ತದೆ. ಉಳಿದೆಲ್ಲಾ ಉಪಜಾತಿಯ ತೋಳಗಳಿಗೆ ಹೋಲಿಸಿದಾಗ ಅವುಗಳು ಸಾಗುವ ಪ್ರದೇಶದಲ್ಲಿ ಏನು ಸಿಕ್ಕರೂ ಬೇಟೆಯಾಡಿ ತಿಂದು ಬದುಕುವ ಸಾಮರ್ಥ್ಯವನ್ನು ಹೊಂದಿವೆ.

ಚಿಕ್ಕ-ಪುಟ್ಟ ಹಕ್ಕಿಗಳಿಂದ ಹಿಡಿದು, ಇಲಿ, ಹೆಗ್ಗಣ, ಕೀಟಗಳು, ಹಣ್ಣುಗಳು, ಸಣ್ಣ ಪ್ರಾಣಿಗಳು, ಕಪ್ಪೆಗಳು, ಮೊಲ ಇವೆಲ್ಲವನ್ನು ತಿಂದು ಆಯಾ ವಾತಾವರಣಕ್ಕೆ ಅದ್ಭುತವಾಗಿ ಹೊಂದಿಕೊಳ್ಳುತ್ತದೆ. ಹಾಗಾಗಿ ಈ ಪ್ರಾಣಿಗೆ ಆಹಾರದ ಕೊರತೆ ಎಂಬುದೇ ಇರುವುದಿಲ್ಲ.

ಅಗಲ ದೇಹ, ಉದ್ದದ ಕಾಲುಗಳಿರುವುದರಿಂದ ಈ ಪ್ರಾಣಿಯು ತನ್ನ ಆಹಾರ ಸೇವನೆಗಾಗಿ ದೂರ ದೂರ ಯಾನ(ಪ್ರಯಾಣ) ಮಾಡಲು ಸಹಕಾರಿಯಾಗಿದೆ. ನೀರು ಇಲ್ಲದೆಯೂ, ಒಣ ಪ್ರದೇಶಗಳಲ್ಲಿಯೂ ಅಷ್ಟೇ ಸಲೀಸಾಗಿ ಜೀವಸುತ್ತವೆ, ಹಣ್ಣುಗಳಲ್ಲಿನ ನೀರಿನಾಂಶವನ್ನು ಪಡೆಯುತ್ತವೆ. ಏಷಿಯಾದಲ್ಲಿ ಅಷ್ಟೇ ಅಲ್ಲದೇ ಯೂರೋಪ್‌ ಆಫ್ರಿಕಾ ಖಂಡದಲ್ಲೂ ಇದು ಕಂಡುಬರುತ್ತದೆ.

LEAVE A REPLY

Please enter your comment!
Please enter your name here