ನೇಪಾಳ -ಹೆಲಿಕಾಪ್ಟರ್‌ ಪತನ-5 ವಿದೇಶಿ ಪ್ರಯಾಣಿಕರ ಸಾವು

ಮಂಗಳೂರು(ಕಠ್ಮಂಡು): ನೇಪಾಳದ ಸೋಲುಖುಂಬುವಿನಿಂದ ಕಠ್ಮಂಡುವಿಗೆ ತೆರಳುತ್ತಿದ್ದ ವೇಳೆ ಕಂಟ್ರೋಲ್ ಟವರ್‌ನೊಂದಿಗೆ ಸಂಪರ್ಕ ಕಡಿತಗೊಂಡಿದ್ದ ಹೆಲಿಕಾಪ್ಟರ್ ಪತನಗೊಂಡಿರುವುದಾಗಿ ನೇಪಾಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪತನಗೊಂಡ ಮನಂಗ್ ಏರ್ ಹೆಲಿಕಾಪ್ಟರ್‌ನಲ್ಲಿದ್ದ ಐವರು ಮೆಕ್ಸಿಕೋ ಮೂಲದ ವಿದೇಶಿ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ. ಕ್ಯಾಪ್ಟನ್‌ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ. ಸಂಪರ್ಕ ಕಳೆದುಕೊಂಡ ಮನಂಗ್ ಏರ್ ಹೆಲಿಕಾಪ್ಟರ್ ಜಿರಿ ಮತ್ತು ಫಾಪ್ಲು ನಡುವಿನ ಪ್ರದೇಶವಾದ ಸೊಲುಖುಂಬು ಜಿಲ್ಲೆಯ ಲಾಮ್ಜುರಾದಲ್ಲಿ ಪತನಗೊಂಡಿದೆ.

LEAVE A REPLY

Please enter your comment!
Please enter your name here