ಮಂಗಳೂರು: 2020ರ ಜೂನ್ 14 ರಂದು ಮುಂಬೈಯ ಫ್ಲಾಟೊಂದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ಯುವ ನಟ ಸುಶಾಂತ್ ಸಿಂಗ್ ರಜಪುತ್ ನ ಶವ ಪತ್ತೆಯಾಗಿದ್ದು, ಇದುವರೆಗೂ ಸಾವಿನ ನಿಗೂಢತೆ ಬಯಲಾಗಿಲ್ಲ.
ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡರೂ ಇದೊಂದು ವ್ಯವಸ್ಥಿತ ಕೊಲೆಯೆಂದು ಹೇಳುತ್ತಿದ್ದು ತನಿಖೆ ಮುಂದುವರೆದಿದೆ. ಈ ನಡುವೆ ಸುಶಾಂತ್ ಸಿಂಗ್ ಅವರ ಆತ್ಮವೂ ನನ್ನಲ್ಲಿ ಪ್ರವೇಶಿಸಿದೆ ಎಂದು ಹೇಳಿಕೊಂಡ ಮಹಿಳೆಯೊಬ್ಬರ ವೀಡಿಯೋ ವೈರಲ್ ಆಗುತ್ತಿದೆ. ಸುಶಾಂತ್ ಸಿಂಗ್ ನ ಆತ್ಮ ನ್ಯಾಯ ಕೇಳಲು ಬಂದಿದೆ ಎನ್ನುವ ಆಕೆ ಬಳಿಗೆ ಬಂದ ವರದಿಗಾರ್ತಿಯೊಬ್ಬರಿಗೆ ತನ್ನನ್ನು ಸುಶಾಂತ್ ಸಿಂಗ್ ಎಂದು ಪರಿಚಯಿಸಿಕೊಂಡು, ಇದು ನನ್ನ ತಾಯಿಯ ದೇಹ, ನನ್ನನ್ನು ಕೊಲ್ಲಲಾಗಿತ್ತು, ನನ್ನ ಗಂಟಲಿಗೆ ಇಂಜೆಕ್ಷನ್ ಕೊಟ್ಟು ಕೊಂದಿದ್ದಾರೆ ಎಂದು ಹೇಳಿದ್ದಾಳೆ.
ಆದರೆ ಮಹಿಳೆ ಕೊಂದವರು ಯಾರೆಂದು ತನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾಳೆ. ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿರುವ ವೀಡಿಯೋವನ್ನು 4 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದು ಮಹಿಳೆ ನಾಟಕವಾಡುತ್ತಿದ್ದಾಳೆ, ಓವರ್ ಆಕ್ಟಿಂಗ್ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಜಸ್ಟಿಸ್ ಫಾರ್ ಎಸ್ ಎಸ್ ಆರ್ ಅಭಿಯಾನ ಮತ್ತೆ ಮುನ್ನಲೆಗೆ ಬಂದಿದೆ.
Ye kab band hoga yaar. ? pic.twitter.com/cY5Q2v4G1W
— Narundar (@NarundarM) July 9, 2023