ಪತ್ರಕರ್ತೆಯೊಂದಿಗೆ ಸಂಸದ ಬ್ರಿಜ್ ಭೂಷಣ್ ಸಿಂಗ್ ಉದ್ಧಟತನ – ವ್ಯಾಪಕ ಆಕ್ರೋಶ

ಮಂಗಳೂರು(ಹೊಸದಿಲ್ಲಿ): ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಪತ್ರಕರ್ತೆಯೊಬ್ಬರೊಂದಿಗೆ ಉದ್ದಟನದಿಂದ ವರ್ತಿಸಿ ನೆಟ್ಟಿಗರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಹಾಗೂ ದಿಲ್ಲಿ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ಕುರಿತು ಖಾಸಗಿ ಮಾಧ್ಯಮದ ಪತ್ರಕರ್ತೆಯೊಬ್ಬರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ವರದಿಗಾರ್ತಿ ಬ್ರಿಜ್ ಭೂಷಣ್ ಬಳಿ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೀರಾ ಎಂದು ಕೇಳಿದಾಗ ಸಿಟ್ಟಿಗೆದ್ದ ಬ್ರಿಜ್ ಭೂಷನ್ ನಾನೇಕೆ ರಾಜೀನಾಮೆ ನೀಡುತ್ತೇನೆ, ನೀವೇಕೆ ರಾಜೀನಾಮೆ ಕೇಳುತ್ತಿದ್ದೀರಿ, ಎಂದು ಕೇಳಿದ್ದಾರೆ. ಸಂಸದರು ಎದುರಿಸುತ್ತಿರುವ ಗಂಭೀರ ಆರೋಪಗಳ ಬಗ್ಗೆ ಗಮನ ಸೆಳೆಯಲು ವರದಿಗಾರ್ತಿ ಪ್ರಯತ್ನಿಸುತ್ತಿದ್ದಂತೆ ಕೋಪಗೊಂಡ ಸಂಸದ ಬ್ರಿಜ್ ಭೂಷಣ್ ಸಿಂಗ್ ಚುಪ್ ಎಂದು ಗದರಿದ್ದಾರೆ.

ಉತ್ತರವನ್ನು ಪಡೆಯಲು ವರದಿಗಾರ್ತಿ ಸಿಂಗ್ ಅವರ ಕಾರಿನವರೆಗೆ ಹಿಂಬಾಲಿಸಿದ್ದು ಸಂಸದ ಬ್ರಿಜ್ ಭೂಷಣ್ ಕಾರಿನ ಬಾಗಿಲನ್ನು ಜೋರಾಗಿ ಹಾಕಿದ್ದಾರೆ. ಇದರಿಂದ ವರದಿಗಾರ್ತಿಯ ಕೈಯಿಂದ ಮೈಕ್ ಕೆಳಗೆ ಬಿದ್ದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಸಂಸದರೊಬ್ಬರು ಮಹಿಳಾ ಪತ್ರಕರ್ತೆಯೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕಿತ್ತು ಎಂದು ಹಲವರು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here