ಪ್ರಾಣಿ ಪ್ರಪಂಚ – 26

ಮಿಂಚುಳ್ಳಿ (Pelargopsis capensis)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಪೆಲಾರ್‌ಗಾಪ್‌ಸಿಸ್ ಕಾಪೆನ್‌ ಸಿಸ್‌ – ಮರದ ಮಿಂಚುಳ್ಳಿ ದ.ಪೂ ಏಷಿಯಾ, ಭಾರತ, ಶ್ರೀಲಂಕಾ ಹಾಗೂ ಇಂಡೋನೇಷಿಯಾ ಪ್ರಾಂತ್ಯಗಳಲ್ಲಿ ಕಾಣಬಹುದು, ಭಾರತದ ಉಷ್ಣವಲಯಗಳಲ್ಲಿ ಕಾಣಬಹುದು.

ಈ ಪ್ರಭೇದದ (ಜಾತಿಯ) ಜಲಜಾರ ಹಕ್ಕಿಯು 14-15 ಇಂಚಿನಷ್ಟು ಉದ್ದವಿದ್ದು, ಉದ್ದವಾದ ಕೊಕ್ಕು ಹಾಗೂ ಕೆಂಪು ಬಣ್ಣದ ಕಾಲ್ಗಳು ಇವೆ. ಗಂಡು ಹೆಣ್ಣುಗಳು ನೋಡಲು ಒಂದೇ ರೀತಿ ಇದ್ದು 15 ಉಪ ಪ್ರಭೇದಗಳನ್ನೊಳಗೊಂಡಿದೆ.

ಬೂದುಬಣ್ಣದ ತಲೆ, ಹಸಿರು ಮೈ ಹಾಗೂ ನೀಲಿ ರೆಕ್ಕೆಗಳನ್ನೊಳಗೊಂಡಿರುತ್ತವೆ. ರೆಕ್ಕೆಗಳನ್ನು ಬಡಿಯುತ್ತ ವೇಗವಾಗಿ ತನ್ನ ಬೇಟೆಯತ್ತ ನೇರವಾಗಿ ಹೋಗುತ್ತದೆ. ಸಾಮಾನ್ಯವಾಗಿ ಮೀನುಗಳು, ಕಪ್ಪೆಗಳು, ಏಡಿ, ಹೆಗ್ಗಣ ಹಾಗೂ ಕೆಲವು ಚಿಕ್ಕ ಹಕ್ಕಿಗಳನ್ನು ಆಹಾರವಾಗಿಸಿಕೊಳ್ಳುತ್ತದೆ.

ನದಿ ತೀರದಲ್ಲಿರುವ ಮರಗಳಲ್ಲಿ ಹಾಗೂ ಗೆದ್ದಲು ಹಿಡಿದಿರುವ ಮರಗಳಲ್ಲಿ ಗೂಡು ಕಟ್ಟಿರುತ್ತದೆ. ಗುಂಡಾದ 2-5 ಬಿಳಿ ಮೊಟ್ಟೆಗಳನ್ನು ಇಡುತ್ತದೆ. ನದಿಯ ದಡದಲ್ಲಷ್ಟೇ ಅಲ್ಲದೆ ಕೆರೆಗಳು ಕರಾವಳಿ ಪ್ರದೇಶದ ಮರಗಳಲ್ಲಿ ಬೀಡು ಬಿಟ್ಟಿರುತ್ತದೆ. ಈ ಜಲಜಾರ ಹಕ್ಕಿಯು ತನ್ನ ಬೇಟೆಗೆ ಗೊತ್ತೇ ಆಗದ ಹಾಗೆ ಎರಗಿ ಬೀಳುತ್ತದೆ.

ಈ ಪ್ರಾದೇಶಿಕ ಹಕ್ಕಿಯು ಹದ್ದು ಹಾಗೂ ಇತರೇ ಪರಭಕ್ಷಕ ಜೀವಿಗಳನ್ನು (ಹಕ್ಕಿಗಳನ್ನು) ಸಮರ್ಥವಾಗಿ ಓಡಿಸುತ್ತದೆ. ಕೀರು ಧ್ವನಿಯುಳ್ಳ ಮಿಂಚುಳ್ಳಿಯು ಪ್ರತಿ 5 ಸೆಕೆಂಡಿಗೊಮ್ಮೆ ಕೆ-ಕೆ-ಕೆ-ಕೆ ಎಂದು ಕಲರವ ಗುಟ್ಟುತ್ತದೆ. ಅದರೊಂದಿಗೆ ದೂರ ದೂರಕ್ಕೂ ಕೇಳುವ ಪೀರ್-ಪೊರ್‌ ಪೊರ್‌ ಎಂಬ ಶಬ್ದವನ್ನು ಮಾಡುತ್ತಾ ಸಾಗುತ್ತದೆ.

LEAVE A REPLY

Please enter your comment!
Please enter your name here