ವಿವೇಕಾನಂದ ಎಂದರೆ ಭರವಸೆ, ಧೈರ್ಯ ಮತ್ತು ವಿಶ್ವಾಸಭರಿತ ವ್ಯಕ್ತಿತ್ವ- ಶರದ್ ವಿವೇಕ್ ಸಾಗರ್

ಮಂಗಳೂರು: ರಾಷ್ಟ್ರ ನಿರ್ಮಾಣವಾಗಲು ವ್ಯಕ್ತಿ ನಿರ್ಮಾಣವಾಗಬೇಕು ಆಗ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ. ಸ್ವಾಮಿ ವಿವೇಕಾನಂದ ಎಂದರೆ ಭರವಸೆ, ಧೈರ್ಯ ಮತ್ತು ವಿಶ್ವಾಸಭರಿತ ವ್ಯಕ್ತಿತ್ವ. ಭಾರತವು ಕತ್ತಲಲ್ಲಿದ್ದಾಗ ಸ್ವಾಮಿ ವಿವೇಕಾನಂದ ಭವ್ಯ ಭಾರತದ ಕನಸು ಕಂಡರು. ಅಷ್ಟೇ ಅಲ್ಲದೇ ಭಾರತ ಇನ್ನಷ್ಟು ವಿರಾಜಮಾನವಾಗುವುದು ಎಂಬ ಮಾತುಗಳನ್ನಾಡಿದರು. ಭಾರತ ಪರಕೀಯರ ಆಳ್ವಿಕೆಯಲ್ಲಿದ್ದಾಗ ಸ್ವಾಮಿ ವಿವೇಕಾನಂದ ಚಿಕಾಗೋದಲ್ಲಿ ತಮ್ಮ ಮಾತುಗಳಿಂದ ಜಗತ್ತನ್ನು ಗೆದ್ದರು. ಇಂತಹ ನಾಯಕತ್ವದ ಪಾಠಗಳನ್ನು ಸ್ವಾಮಿ ವಿವೇಕಾನಂದರಿಂದ ಕಲಿತುಕೊಳ್ಳಬೇಕಾಗಿದೆ” ಎಂದು ಸಮಾಜಶೀಲ ಉದ್ಯಮಿ ಹಾಗೂ ಡೆಕ್ಸ್ಟರಿಟಿ ಗ್ಲೋಬಲ್ ಸಂಸ್ಥಾಪಕ ಶರದ್ ವಿವೇಕ್ ಸಾಗರ್‌ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಇಪ್ಪತ್ತೇಳನೇ ಉಪನ್ಯಾಸದಲ್ಲಿ”ಸ್ವಾಮಿ ವಿವೇಕಾನಂದ ಮತ್ತು ಯುವ ನಾಯಕತ್ವ” ಎಂಬ ವಿಷಯದ ಕುರಿತು ಅವರು ಆನ್ ಲೈನ್ ಮೂಲಕ ಮಾತನಾಡಿದರು.

ಈ ಕಾರ್ಯಕ್ರಮವು ಮಂಗಳೂರಿನ ಪಾಂಡೇಶ್ವರದ ಶ್ರೀನಿವಾಸ ವ್ಯವಹಾರ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕೇಂದ್ರೀಯ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದರ ಮಿತ್‌ಚೆನ್ನಿತ್ತಲ ಇವರು ಮಾತನಾಡಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಆಲೋಚನೆಗಳು ಯಾವಾಗಲೂ ನನಗೆ ಸ್ಪೂರ್ತಿದಾಯಕವಾಗಿದೆ. ಸಣ್ಣ ವಯಸ್ಸಿನಿಂದಲೂ ಸ್ವಾಮಿ ವಿವೇಕಾನಂದರ ಜೀವನದ ಬಗ್ಗೆ ಒಂದಷ್ಟು ಕಲಿತು ಬೆಳೆದಿದ್ದೇನೆ. ಅವರ ಒಂದಷ್ಟು ವಾಕ್ಯಗಳು ಯಾವಾಗಲೂ ನನ್ನ ಮನಸ್ಸಲ್ಲಿ ಅನುರಣಿಸುತ್ತವೆ. ” ಎಂದು ಹೇಳಿದರು.

ನಿವೃತ್ತ ಯೋಧರಾದ ಬೆಳ್ಳಾಲ ಗೋಪಿನಾಥ್‌ರಾವ್, ಮಂಗಳೂರು ರಾಮಕೃಷ್ಣ ಮಿಷನ್ ಮುಖ್ಯ ಸಂಯೋಜಕರಾದ‌ ರಂಜನ್ ಬೆಳ್ಳರ್ಪ್ಪಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶ್ರೀನಿವಾಸ ಸ್ನಾತಕೋತ್ತರ ವ್ಯವಹಾರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ಶ್ರೀನಿವಾಸ ವಿಶ್ವವಿದ್ಯಾಲಯದ ಡೀನ್‌ ಡಾ. ವೆಂಕಟೇಶ್ ವಂದಿಸಿದರು.

LEAVE A REPLY

Please enter your comment!
Please enter your name here