ಮಂಗಳೂರು(ವಾರಾಣಸಿ): ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಕುರಿತ ಆದೇಶವನ್ನು ಇದೇ 21ಕ್ಕೆ ಪ್ರಕಟಿಸುವುದಾಗಿ ಇಲ್ಲಿನ ನ್ಯಾಯಾಲಯ ಶುಕ್ರವಾರ ತಿಳಿಸಿದೆ.
ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ASI) ನಿರ್ದೇಶನ ನೀಡುವಂತೆ ಕೋರಿ ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿದ್ದವು.
‘ವಝುಖಾನ ಹೊರತುಪಡಿಸಿ ಸಂಪೂರ್ಣ ಮಸೀದಿ ಕುರಿತು ವೈಜ್ಞಾನಿಕ ಮತ್ತು ಪುರಾತತ್ವ ಸಮೀಕ್ಷೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದೇವೆ. ಇಂಥ ತನಿಖೆಯಿಂದ ಮಾತ್ರ ವಿಶ್ವನಾಥ ದೇಗುಲ– ಜ್ಞಾನವಾಪಿ ಮಸೀದಿ ವಿವಾದ ಬಗೆಹರಿಯಲು ಸಾಧ್ಯ ಎಂಬುದಾಗಿ ವಾದ ಮಂಡಿಸಿದ್ದೇನೆ’ ಎಂದು ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ತಿಳಿಸಿದ್ದಾರೆ.