ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಂದ

ಮಂಗಳೂರು(ಅಬುಧಾಬಿ): ಭಾರತ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ರೂಪಾಯಿ – ದಿರ್ಹಾಮ್‌ನಲ್ಲಿ ವ್ಯವಹಾರ ನಡೆಸಲು ಪರಸ್ಪರ ಸಹಿ ಹಾಕಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಸಮ್ಮುಖದಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೆಚ್ ಇ ಖಲೀದ್ ಮೊಹಮದ್ ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.

ಭಾರತ ಮತ್ತು ಯುಎಇ ಇನ್ನು ಮುಂದೆ ರಫ್ತು ಮತ್ತು ಆಮದನ್ನು ದೇಶಿಯ ಕರೆನ್ಸಿಯಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮತ್ತು ಯುಎಇಯ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಐಪಿಪಿ ಇನ್ನು ಮುಂದೆ ಲಿಂಕ್‌ ಆಗಲಿದೆ.

LEAVE A REPLY

Please enter your comment!
Please enter your name here