ಮಂಗಳಮುಖಿಯರ ಸೋಗಿನಲ್ಲಿ ದೋಚುತ್ತಿದ್ದ ವ್ಯಕ್ತಿ ಅರೆಸ್ಟ್​

ಮಂಗಳೂರು(ಬೆಂಗಳೂರು): ವೇಷ ಧರಿಸಿ, ಮಂಗಳಮುಖಿಯರ ಜತೆ ಸೇರಿ ಭಿಕ್ಷಾಟನೆ ಮಾಡುತ್ತಿದ್ದದ್ದಲ್ಲದೇ, ಸ್ಥಳೀಯ ಅಂಗಡಿ ಮಾಲೀಕರಿಗೆ ತೊಂದರೆ ಕೊಡುತ್ತಿದ್ದ ಬಾಗಲಗುಂಟೆ ನಿವಾಸಿ ಚೇತನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ, ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದು, ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಹೆಣ್ಣಿನ ವೇಷ ಧರಿಸಿ, ಮಂಗಳಮುಖಿಯರ ಜತೆ ಸೇರಿ ಸುಮಾರು ನಾಲ್ಕೈದು ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಇತ್ತೀಚೆಗೆ ತುಮಕೂರು ರಸ್ತೆಯ ಮಂಜುನಾಥನಗರದಲ್ಲಿ ಬಾಡಿಗೆಗೆ ರೂಂ ಪಡೆದು ಆಗಾಗ್ಗೆ ಅಲ್ಲಿಯೇ ಉಳಿದುಕೊಳ್ಳುತ್ತಿದ್ದ.

ಮಂಗಳಮುಖಿಯರ ಜತೆ ಸ್ನೇಹ ಬೆಳೆಸಿದ್ದ ಆರೋಪಿ ಚೇತನ್, ಅವರಿಗೆ ತನ್ನ ಬಗ್ಗೆ ಯಾವುದೇ ವಿಚಾರ ಹೇಳಿಕೊಂಡಿರಲಿಲ್ಲ. ಮತ್ತೊಂದೆಡೆ ಆತ ಗಂಡು ಎಂಬುದು ಆತನ ಜತೆಗಿದ್ದ ಮಂಗಳಮುಖಿಯರಿಗೂ ತಿಳಿದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here