



ಮಂಗಳೂರು (ಪಿರಿಯಾಪಟ್ಟ): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ಇಂದು ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರೊಂದು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವ ದಾರಿಯಲ್ಲಿ ಕಮಲಾಪುರದ ಬಳಿ ಬೆಳಗ್ಗೆ 4:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ಮುದಾಸಿರ್, ಮುಜಾಹಿದ್, ಅಹಮದ್ ಪಾಷಾ ಮೃತಪಟ್ಟಿದ್ದಾರೆ.







ಇನ್ನುಳಿದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ. ಅಪಘಾತದ ಸಮಯದಲ್ಲಿ ಪುತ್ತೂರು ಬಪ್ಪಳಿಗೆಯ ಶಾಪಿ ಗಡಪ್ಪಿಲ, ಅಮ್ಮಿ ಗಡಪ್ಪಿಲ, ಹುರೈಸ್ ಬಪ್ಪಳಿಗೆ, ಆಶಿಕ್ ಬಪ್ಪಳಿಗೆ ಇದೇ ದಾರಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದು ಘಟನೆ ನೋಡಿ ಕಾರು ನಿಲ್ಲಿಸಿ ಹರಸಾಹಸ ಪಟ್ಟು ಕಾರಿನಲ್ಲಿದ್ದ ಮೃತ ದೇಹವನ್ನು ಹೊರಗೆ ತೆಗೆಯುವಲ್ಲಿ ಸಹಕರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.





ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ











