ಮಂಗಳೂರು (ಉತ್ತರಪ್ರದೇಶ): ಸಚಿನ್ ಎಂಬ ಉತ್ತರ ಪ್ರದೇಶದ ಯುವಕನನ್ನು ಹುಡುಕಿ ಪಾಕಿಸ್ತಾನ ಮೂಲದ ಸೀಮಾ ಹೈದರ್ ಎಂಬ ಮಹಿಳೆ ಅಕ್ರಮವಾಗಿ ಭಾರತಕ್ಕೆ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ.
ಪಬ್ಜಿ ಆಡುವಾಗ ಪ್ರೇಮಾಂಕುರವಾಗಿ ಅರಳಿದ ಪ್ರೀತಿ ಗಡಿಯಾಚೆಗೂ ಬಂದು ಅವರಿಬ್ಬರನ್ನು ಒಂದಾಗಿಸಿತ್ತು. ಅಪಾರ್ಟ್ಮೆಂಟ್ ಒಂದರಲ್ಲಿ ನಾಲ್ಕು ಮಕ್ಕಳೊಂದಿಗೆ ವಾಸವಿದ್ದ ಸೀಮಾ ಐದರ್ ಮತ್ತು ಆಕೆಗೆ ಆಶ್ರಯ ನೀಡಿದ್ದ ಸಚಿನ್ ನನ್ನು ಇತ್ತೀಚೆಗೆ ವೀಸಾ ಇಲ್ಲದೆ ಅಕ್ರಮವಾಗಿ ಭಾರತಕ್ಕೆ ಬಂದ ಕಾರಣಕ್ಕಾಗಿ ಬಂಧಿಸಲಾಗಿತ್ತು.
ವಿಚಾರಣೆ ನಡೆಸಿದ ಪೊಲೀಸರು ಇವರಿಬ್ಬರದ್ದು ಪಬ್ಜಿ ಪ್ರೇಮ ಎಂದು ಸುಮ್ಮನಾಗಿದ್ದರು. ಆದರೆ ಈಗ ಈ ಸೀಮಾ ಹೈದರ್ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿದೆ.
ಈಕೆ ಕೇವಲ ಪಾಗಲ್ ಪ್ರೇಮಿಯಲ್ಲ ಪಾಕಿಸ್ತಾನದ ಐಎಸ್ಐ ಏಜೆಂಟ್ ಎಂಬ ಶಂಕೆ ವ್ಯಕ್ತವಾಗಿದೆ. ಈಕೆ ಭಾರತಕ್ಕೆ ದುಬಾಯಿ ನೇಪಾಳ ಮೂಲಕ ಪ್ರವೇಶಿಸಿದ್ದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಇಂಟಲಿಜೆನ್ಸ್ ಏಜೆನ್ಸಿ ಸೀಮಾ ಮೇಲೆ ಹದ್ದಿನ ಕಣ್ಣಿಟ್ಟಿದೆ. ಇಂಡಿಯಾ ಪಾಕಿಸ್ತಾನದ ಈ ಪಬ್ಜಿ ಲವ್ ದೇಶ ವ್ಯಾಪಿ ಸುದ್ದಿಯಾದ ನಂತರ ಸೀಮಾ ಮೇಲೆ ಪೊಲೀಸರಿಗೆ ಅನುಮಾನ ಹುಟ್ಟಿದೆ. ಇದಕ್ಕೆ ಕಾರಣ ಸೀಮಾ ಹೈದರ್ ಬಳಸುತ್ತಿರುವ ನಾಲ್ಕು ಫೋನುಗಳು. ಸೀಮಾ ಫೋನ್ ಕಾಲ್ ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜೊತೆಗೆ ಸೀಮಾಳ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೂ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.
ಸೀಮಾ ಆಕೆ ಮಕ್ಕಳನ್ನು ಮತ್ತು ಸಚಿನ್ ನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ. ಸೀಮಾಳ ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು ಪತ್ನಿಯನ್ನು ಮತ್ತೆ ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಭಾರತ ಸರಕಾರಕ್ಕೆ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಸೀಮಾ ಗಡಿದಾಟಿ ಬಂದದ್ದಕ್ಕಾಗಿ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದಾರೆ. ಎರಡು ದಿನಗಳ ಅಂತರದಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮರಿ ಮಾತಾ ದೇವಾಲಯ ಹಾಗೂ ಕರಾಚಿಯ ದೇವಾಲಯವನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ. ಭಾರತದಲ್ಲಿಯೂ ಸೀಮಾಳ ವಿರುದ್ಧ ಕೂಗು ಕೇಳಿ ಬಂದಿದೆ. ಇಲ್ಲಿನ ಬಲಪಂಥೀಯ ಸಂಘಟನೆಗಳು ಸೀಮಾಳನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಒತ್ತಾಯಿಸುತ್ತಿದ್ದು, ಆಕೆಯ ಗಡಿಪಾರಿಗೆ ಹಿಂದೂ ಸಂಘಟನೆಗಳು 72 ತಾಸುಗಳ ಗಡುವು ನೀಡಿದೆ.