ಕೆಲಸಕ್ಕೆ ಸೇರಿದ ಮೊದಲ ದಿನವೇ ಲಂಚಕ್ಕೆ ಕೈಚಾಚಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

ಮಂಗಳೂರು (ರಾಂಚಿ): ಜೆಪಿಎಸ್‌ಸಿ ಪರೀಕ್ಷೆಯಲ್ಲಿ 108ನೇ ರ‍್ಯಾಂಕ್ ಪಡೆದುಕೊಂಡಿದ್ದ ಮಿಥಾಲಿ ಶರ್ಮಾ ತನ್ನ ಮೊದಲ ಪೋಸ್ಟಿಂಗ್ ನ, ಮೊದಲ ದಿನವೇ ಲಂಚಕ್ಕೆ ಕೈಚಾಚಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದು, ಜಾರ್ಖಂಡ್ ಎಸಿಬಿ ಯಿಂದ ಬಂಧನಕ್ಕೊಳಗಾಗಿದ್ದಾರೆ.

ಜಾರ್ಖಂಡ್ ನ ಭ್ರಷ್ಟಾಚಾರ ನಿಗ್ರಹದಳ ಕೋ ಆಪರೇಟಿವ್ ಸೊಸೈಟಿಯಲ್ಲಿ ಸಹಾಯಕ ರಿಜಿಸ್ಟರ್ ಹುದ್ದೆಯಲ್ಲಿದ್ದ ಮಿಥಾಲಿ ಶರ್ಮಾ 10 ಸಾವಿರ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮಿಥಾಲಿ ಶರ್ಮಾ ಲಂಚಕ್ಕೆ ಬೇಡಿಗೆ ಇಟ್ಟಿದ್ದಾರೆ ಎಂದು ರಾಮೇಶ್ವರ ಪ್ರಸಾದ್ ಯಾದವ್ ಎನ್ನುವ ವ್ಯಕ್ತಿ ದೂರು ದಾಖಲಿಸಿದ ಬೆನ್ನಲ್ಲಿಯೇ ಎಸಿಬಿ ಕಾರ್ಯಪ್ರವೃತ್ತವಾಗಿ ಮಿಥಾಲಿ ಶರ್ಮಾಳನ್ನು ಬಂಧಿಸಿದೆ.

ಯಾದವ್ ಕೊಡೆಮಾರು ವ್ಯಾಪಾರ ಮಂಡಲ್ ಸಹಯೋಗ ಸಮಿತಿ ಲಿಮಿಟೆಡ್ ನ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದು, ಕೊಡೆ ಮಾರ್ ವ್ಯಾಪಾರ ಮಂಡಲವು ಬೀಜ ವಿತರಣೆಯ ನೋಡಲ್ ಏಜೆನ್ಸಿ ಯಾಗಿದೆ. ಜೂನ್ 16ರಂದು ಮಿಥಾಲಿ ಶರ್ಮಾ ಕಚೇರಿಯ ಪರಿಶೀಲನೆಗೆ ಆಗಮಿಸಿದ್ದು, ನನಗೆ ಗೊತ್ತಿಲ್ಲದ ಯಾವುದೋ ವಿಚಾರವನ್ನು ಹಿಡಿದುಕೊಂಡು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಕೇಳುವ ಕುರಿತಾಗಿ ನಾನು ಅವರ ಕಚೇರಿಗೆ ಹೋಗಿದ್ದೆ. ಈ ವೇಳೆ ಇಲಾಖಾ ಶಿಸ್ತು ಕ್ರಮದಿಂದ ಪಾರಾಗಬೇಕಿದ್ದಲ್ಲಿ 20 ಸಾವಿರ ರೂಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ರಾಮ್ ಪ್ರಸಾದ್ ಯಾದವ್ ತನ್ನ ದೂರಿನಲ್ಲಿ ತಿಳಿಸಿದ್ದರು.

LEAVE A REPLY

Please enter your comment!
Please enter your name here