ಪ್ರಾಣಿ ಪ್ರಪಂಚ-35

ಭಾರತದ ಮುಳ್ಳುಹಂದಿ(Hystrix indica)

ಮಕ್ಕಳಿಗಾಗಿ ವಿಶೇಷ ಮಾಹಿತಿ

ಇದು ಹೆಗ್ಗಣದ ಪ್ರಜಾತಿಗೆ ಸೇರಿದಂತಹ ಪ್ರಾಣಿ. ಹೆಚ್ಚಾಗಿ ದಕ್ಷಿಣ ಏಷಿಯಾದ ಹಾಗು ಮಧ್ಯ ಪೂರ್ವದ ಹಲವೆಡೆ ಕಂಡುಬರುತ್ತದೆ. ಎಲ್ಲಾ ವಾತಾವರಣ ಹಾಗು ಹವಮಾನಗಳಿಗೂ ಅತ್ಯಂತ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಸಸ್ಯರಾಶಿಯನ್ನವಲಂಬಿಸಿ ಬದುಕುತ್ತವೆ. ಈ ಸಸ್ಯಹಾರಿ ಮುಳ್ಳುಹಂದಿಯು ನಿಶಾಚರಿಯಾಗಿದ್ದು ಭೂಮಿಯನ್ನು ಕೊರೆದು ಬಿಲಗಳೊಳಗೆ ರಕ್ಷಣೆಯನ್ನು ಹೊಂದುತ್ತದೆ. ಹಣ್ಣು ಹಂಪಲುಗಳು, ಗೆಡ್ಡೆ ಗೆಣಸುಗಳು ಹಾಗು ದವಸ ಧಾನ್ಯಗಳನ್ನು ತಿಂದು ಜೀವಿಸುತ್ತದೆ. ಬೆಟ್ಟದ ತಪ್ಪಲಿ ನಲ್ಲಿ, ನದಿ ತೀರ ಪ್ರದೇಶದಲ್ಲಿ ವ್ಯವಸಾಯ ಮಾಡುವ ರೈತಾಪಿ ವರ್ಗದವರಿಗೆ ಮುಳ್ಳು ಹಂದಿಯು ಸಿಡಿದೆದ್ದರೆ ಜೀವಕ್ಕೆ ಅಪಾಯ ಎಂಬುದು ಖಚಿತ.

ಒಂದು ವರ್ಷಕ್ಕೆ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ. ಭಾರತದಲ್ಲಿ ಕಂಡುಬರುವ ಈ ಮುಳ್ಳು ಹಂದಿಯು ಸುಮಾರು 3 ಅಡಿ ಎತ್ತರ ಬೆಳೆಯುತ್ತದೆ ಹಾಗು 1405 ಕೆ.ಜಿ ತೂಕವನ್ನು ಪಡೆಯುತ್ತದೆ. ಮೈಮೇಲೆ ಒಂದರ ಮೇಲೊಂದು ಹಲವಾರು ಮುಳ್ಳಿನ ಪದರಗಳನ್ನು ಹೊಂದಿದ್ದು ಈ ಮುಳ್ಳುಗಳು ಹರಿತವಾಗಿರುತ್ತವೆ. ಇತರೇ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ಮುಳ್ಳುಗಳನ್ನು ಹೊಂದಿರುತ್ತದೆ.

ಮುಳ್ಳು ಹಂದಿಯ ಪಾದಗಳು ಅಗಲವಾಗಿದ್ದು ಉದ್ದ ಉಗುರುಗಳನ್ನು ಹೊಂದಿರುತ್ತದೆ, ಈ ಉಗುರುಗಳು ಬಿಲ ಕೊರೆಯುವಲ್ಲಿ ಸಹಾಯಕಾರಿಯಾಗಿವೆ. ಚಿರತೆಗಳು, ಹುಲಿಗಳು ಕಾಡುಗಳ ನಾಶದಿಂದಾಗಿ ತಮಗೆ ಆಹಾರವೇ ಇಲ್ಲದಂತಾಗಿ ಹಸಿವಿನಿಂದ ಕೊನೆಗೆ ಈ ಮುಳ್ಳುಹಂದಿಯೊಂದಿಗೆ ಸೆಣೆಸಾಡಿ ಜರ್ಝರಿತಗೊಂಡು, ಸೋತು ಮನುಷ್ಯರನ್ನೇ ತಿನ್ನುವ ಪರಿಸ್ಥಿತಿ ಇಂದು ಬಂದೊದಗಿದೆ.

LEAVE A REPLY

Please enter your comment!
Please enter your name here