ಕಾಶ್ಮೀರದಲ್ಲಿ ಭಾರಿ ಮಳೆ – ರಾಷ್ಟ್ರೀಯ ಹೆದ್ದಾರಿ ಬಂದ್-ಅಮರನಾಥ ಯಾತ್ರೆ ಸ್ಥಗಿತ

ಮಂಗಳೂರು(ಶ್ರೀನಗರ): ಜಮ್ಮು –ಕಾಶ್ಮೀರದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದರಿಂದ ಜಮ್ಮುವಿನ ಶಿಬಿರದಿಂದ ಕಾಶ್ಮೀರಕ್ಕೆ ಹೊರಟಿದ್ದ 3,000ಕ್ಕೂ ಹೆಚ್ಚು ಅಮರನಾಥ ಯಾತ್ರಿಕರ ಹೊಸ ಬ್ಯಾಚ್ ಅನ್ನು ರಾಂಬನ್‌ನಲ್ಲಿ ತಡೆಯಲಾಗಿದೆ.

3,472 ಯಾತ್ರಾರ್ಥಿಗಳ 20ನೇ ಬ್ಯಾಚ್ ಶನಿವಾರ ಮುಂಜಾನೆ ಜಮ್ಮುವಿನ ಮೂಲ ಶಿಬಿರದಿಂದ 132 ವಾಹನಗಳಲ್ಲಿ ಹೊರಟಿತ್ತು. ಆದರೆ, ಹೆದ್ದಾರಿಯನ್ನು ಮುಚ್ಚಿದ್ದರಿಂದ ಬೆಂಗಾವಲು ಪಡೆ ಚಂದರ್‌ಕೋಟೆಯಲ್ಲಿ ಯಾತ್ರಿಕರನ್ನು ತಡೆದು ನಿಲ್ಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಳೆಯಿಂದಾಗಿ 270 ಕಿ.ಮೀ ಉದ್ದದ ಮೆಹರ್ ಮತ್ತು ದಲ್ವಾಸ್ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 3 ಲಕ್ಷಕ್ಕೂ ಹೆಚ್ಚು ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here