ಮುರಿದುಬಿದ್ದ ಹೋರ್ಡಿಂಗ್ – ತಪ್ಪಿದ ಭಾರೀ ಅನಾಹುತ

ಮಂಗಳೂರು(ಉಳ್ಳಾಲ): ಕಟ್ಟಡ ಮೇಲಿದ್ದ ಜಾಹೀರಾತು ಹೋರ್ಡಿಂಗ್ ಭಾರೀ ಗಾಳಿ ಮಳೆಗೆ ತುಂಡಾಗಿ ಬಿದ್ದು, ಪಾದಾಚಾರಿ ವೃದ್ದರೊಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾದ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದಿದೆ.

ಜು.22 ರಂದು ಸಂಜೆ ವೇಳೆಗೆ ಬೀಸಿದ ಗಾಳಿ ಮಳೆಗೆ ತೊಕ್ಕೊಟ್ಟು ಮುಖ್ಯ ರಸ್ತೆಗೆ ತಾಗಿಕೊಂಡಿರುವ ವಾಣಿಜ್ಯ ಕಟ್ಟಡದ ಮೇಲಿದ್ದ ಹೋರ್ಡಿಂಗ್ಸ್ ಮುರಿದು ಬಿದ್ದಿದೆ. ಹೋರ್ಡಿಂಗ್ಸ್ ನ ಕಬ್ಬಿಣದ ಸಲಾಕೆ ಬಿದ್ದು ವೃದ್ದರೊಬ್ಬರಿಗೆ ಅಲ್ಪಸ್ವಲ್ಪ ಗಾಯವಾಗಿದೆ. ಮುರಿದುಬಿದ್ದ ಹೋರ್ಡಿಂಗ್ ತೆರವುಗೊಳಿಸಲಾಗಿದೆ.

LEAVE A REPLY

Please enter your comment!
Please enter your name here