ಮಂಗಳೂರು: ನೀರಜ್ ಕಕ್ಕರ್, ಈತನ ಧೈರ್ಯವನ್ನು ಮೆಚ್ಚಲೇಬೇಕು. ಅಮೇರಿಕಾದ ವಾರ್ಟನ್ ಯುನಿವರ್ಸಿಟಿಯಿಂದ ಮಾರ್ಕೆಟಿಂಗ್ ನಲ್ಲಿ ಎಂಬಿಎ ಮಾಡಿ ಕೋಕೋ ಕೋಲಾ ಇಂಡಿಯಾದಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ. ಲಕ್ಷಾಂತರ ರೂಪಾಯಿ ಸಂಬಳ. ಸುಮಾರು ಏಳೆಂಟು ವರ್ಷ ಅಲ್ಲೇ ಇರುತ್ತಾನೆ.
2009ರಲ್ಲಿ ರೂಟೀನ್ ಕೆಲಸ ಯಾಕೋ ಬೋರ್ ಅನ್ನಿಸಿ ಬೆಂಗಳೂರಿಗೆ ಬರುತ್ತಾನೆ. ಯಾರೋ ಸ್ನೇಹಿತರ ಮುಖಾಂತರ ಇನ್ಫೋಸಿಸ್ ನಾರಾಯಣ ಮೂರ್ತಿಯ ಪರಿಚಯವಾಗುತ್ತದೆ. Tzing ಎನ್ನುವ ಒಂದು ಎನರ್ಜಿ ಡ್ರಿಂಕ್ ಪ್ರೊಪೋಸಲ್ ನಾರಾಯಣ ಮೂರ್ತಿಯ ಮುಂದಿಡುತ್ತಾನೆ. ಏನೋ ಅವರಿಗೆ ಭರವಸೆ ಬಂದು 2.50 ಕೋಟಿ ಕೊಡುತ್ತಾರೆ. ಬೆಂಗಳೂರಿನಲ್ಲಿ ಹೆಕ್ಟರ್ ಬೇವರೇಜಸ್ ಎಂಬ ಕಂಪನಿ ಓಪನ್ ಆಗುತ್ತದೆ. ಪ್ರಾಡಕ್ಟ್ ಶುರುವಾಗುತ್ತದೆ. ಮಾರ್ಕೆಟಿಗೆ ಬರುತ್ತದೆ. ಆದರೆ ಹೇಳಿಕೊಳ್ಳುವಂತಹ ಸ್ಪೀಡ್ ಸಿಗುವುದಿಲ್ಲ.
ಆಗ ಇವನಿಗೆ ಜೊತೆ ಆಗುವುದು ಕೋಕಾಕೋಲದಲ್ಲಿ ಇವನ ಜೂನಿಯರ್ ಆಗಿದ್ದ ಸುಹಾಸ್ ಮಿಶ್ರ. ಅವನು ಒಂದು ವಿಶಿಷ್ಟ ಶೈಲಿಯ ಪ್ಯಾಕಿಂಗ್ ಇರುವ ಫ್ರೂಟ್ ಜ್ಯೂಸ್ ಕಾನ್ಸೆಪ್ಟ್ ತಂದು ತೋರಿಸ್ತಾನೆ. ಸ್ವಲ್ಪ ದಿನದಲ್ಲಿ ಕೋಕ ಕೋಲಾದ ಮಾರ್ಕೆಟಿಂಗ್ ಹೆಡ್ ಆಗಿದ್ದ ಶ್ರೀಪಾದ ನಾಡಕರ್ಣಿ ಬಂದು ಇವರನ್ನು ಸೇರಿಕೊಳ್ಳುತ್ತಾನೆ. ಇನ್ನು ಒಂದಿಬ್ಬರು ಬಂದು ಇನ್ವೆಸ್ಟ್ ಮಾಡ್ತಾರೆ. ಪೇಪರ್ ಬೋಟ್ ಹೆಸರು ಕನ್ಫರ್ಮ್ ಆಗ್ತದೆ. 2013 ಆಗಸ್ಟ್ ನಲ್ಲಿ ಪ್ರಾಡಕ್ಟ್ ಮಾರ್ಕೆಟಿಗೆ ಇಳಿಯುತ್ತದೆ. ಮಾವಿನ ಜ್ಯೂಸ್ ಜೊತೆ ಕಚ್ಚಾ ಮ್ಯಾಂಗೋ, aam ರಸ್, aam ಪನ್ನ, jaljeera ಇಂಥವೆಲ್ಲ ಬರುತ್ತದೆ. ಜನರಿಗೆ ಇಷ್ಟವಾಗುತ್ತದೆ. ಸದ್ಯಕ್ಕೆ ವಾರ್ಷಿಕ 330 ಕೋಟಿ ವಹಿವಾಟು ನಡೆಸುವ ಹೆಕ್ಟರ್ ಬೇವರೇಜಸ್ ಕೋಕ್ ಪೆಪ್ಸಿ ಅಂತಹ ಬಹು ರಾಷ್ಟ್ರೀಯ ಕಂಪನಿಗಳಿಗೆ ಸವಾಲಾಗಿ ನಿಂತಿದೆ. ಧೈರ್ಯo ಪುರುಷ ಲಕ್ಷ್ಮಣo.
ಮಾಹಿತಿ/ಚಿತ್ರ
ಇಕ್ಬಾಲ್ ಪುತ್ತೂರು